ಇಂದು ಸ್ವ ಕ್ಷೇತ್ರದಲ್ಲಿ ಡಿಸಿಎಂ ಪರಂ ಏನೇನ್ಮಾಡ್ತಾರೆ..?

ತುಮಕೂರು: ಸಿದ್ದರಾಮಯ್ಯ ಬದಾಮಿಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಪ್ರವಾಸ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಈಗ ಡಿಸಿಎಂ ಡಾ.ಜಿ. ಪರಮೇಶ್ವರ್ ಕೂಡ ತಮ್ಮ ಕ್ಷೇತ್ರ ಕೊರಟಗೆರೆಯ ಪ್ರವಾಸ ನಡೆಸಲಿದ್ದಾರೆ.

ಕೊರಟಗೆರೆ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ತೆರಳಲಿರುವ ಪರಮೇಶ್ವರ್​, ಇಂದು ಇಡೀ ದಿನ ತಮ್ಮ ಕ್ಷೇತ್ರದಲ್ಲೇ ಕಾಲ ಕಳೆಯಲಿದ್ದಾರೆ. ಕೋರಾ, ತೋವಿನಕೆರೆ, ವಡ್ಡಗೆರೆ, ಪುರವರ, ಹೊಳವನಹಳ್ಳಿ, ಕೋಳಾಲ ಸೇರಿದಂತೆ ಹಲವೆಡೆ ಪ್ರವಾಸ ಮಾಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv