ಡೈರಿ ಆರೋಪ; ಸತ್ಯ ಹೊರ ಬಂದ್ಮೇಲೆ ಮಾತನಾಡಬಹುದು: ಡಿಸಿಎಂ

ಹುಬ್ಬಳ್ಳಿ: ಬಿಎಸ್‌ವೈ ವಿರುದ್ಧ ಕಾಂಗ್ರೆಸ್‌ ಡೈರಿ ಆರೋಪಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಐಟಿ ಇಲಾಖೆ ಕಾನೂನು ಪ್ರಕಾರ ಪರಿಶೀಲನೆ ಮಾಡ್ತಾರೆ. ಅದು ಸತ್ಯವೇ ಆದರೆ ಯಡಿಯೂರಪ್ಪ ಸಾರ್ವಜನಿಕ ವಲಯದಲ್ಲಿ ಯಾವ ರೀತಿ ಆಡಳಿತ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತೆ. ಸತ್ಯ ಹೊರಬಂದ ಮೇಲೆ ಈ ಬಗ್ಗೆ ಮಾತನಾಡಬಹುದು ಎಂದರು.

ಧಾರವಾಡ ನಿರ್ಮಾಣ ಹಂತದ ಕಟ್ಟಡ ಕುಸಿತ ವಿಚಾರದ ಬಗ್ಗೆಯೂ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ದುರದೃಷ್ಟಕರ ಘಟನೆ. ಬಹಳ ಜನ ಇನ್ನೂ ಕಟ್ಟಡದಲ್ಲಿ ಸಿಲುಕಿಕೊಂಡಿದ್ದಾರೆ ಅನ್ನೋ ಮಾಹಿತಿ ಇದೆ. ಅಧಿಕಾರಿಗಳು, ಮಾಲೀಕರು ಬಹಳ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಮೊದಲೇ ಎಚ್ಚರಿಕೆ ವಹಿಸಬೇಕಿತ್ತು, ಕ್ಯೂರಿಂಗ್ ಮಾಡಿ ಟೆಸ್ಟ್ ಮಾಡಿದ್ದು ವರದಿಗಳಿಲ್ಲ. ಇವೆಲ್ಲ ಗಮನಿಸಿ 7 ಜನರನ್ನ ಸಸ್ಪೆಂಡ್ ಮಾಡಿದ್ದೇವೆ. ಮೃತಪಟ್ಟವರಿಗಾಗಿ ನೋವಿನಿಂದ ವಿಷಾದ ವ್ಯಕ್ಯಪಡಿಸುತ್ತೇನೆ. ಅವರ ಕುಟುಂಬಸ್ಥರಿಗೆ, ಅವರಿಗೆ ನಷ್ಟ ಬರಿಸಲಿ ಅಂತ ಭಗವಂತನನ್ನ ಬೇಡಿಕೊಳ್ತೇನೆ. ಅವರಿಗೆ ಸರಕಾರದಿಂದ ಚಿಕಿತ್ಸೆ ಕೊಡ್ತೇವೆ. ಮಾಲೀಕರು, ಕಾಂಟ್ರಾಕ್ಟರನ್ನ ಅರೆಸ್ಟ್ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಎನ್.ಡಿ ಅರ್.ಎಪ್ ಸ್ಥಳೀಯ ಜನ ಎಲ್ಲರೂ ಕಾರ್ಯಾಚರಣೆಗೆ ಸಹಾಯ ಮಾಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಲುತ್ತೇನೆ. ಇನ್ಮುಂದೆ ಇಂತಹ ಕಟ್ಟಡ ಕಟ್ಟಲು ಹೊಸದಾಗಿ ಪ್ಲ್ಯಾನ್ ಮಾಡ್ತೇವೆ. ಸ್ಟ್ರಿಕ್ಟ್ ಆದಂತಹ ನಿಯಮ ಪಾಲಿಸುವಂತ ನಿಯಮಗಳನ್ನ ತರೋದಕ್ಕೆ ಚರ್ಚೆ ಮಾಡ್ತೇವೆ. ಆಯಾ ಸಂಬಂಧ ಇಲಾಖೆಯ ಜೊತೆ ಮಾತುಕತೆ ನಡೆಸಿ ಕಠಿಣ ನಿಯಮಗಳನ್ನು ತರುತ್ತೇವೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv