ಬಾಲ ಕಾರ್ಮಿಕರನ್ನು ರಕ್ಷಿಸಿದ ಡಿಸಿ ವಿಜಯ ಜ್ಯೊತ್ಸ್ನಾ

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರದಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 10ಕ್ಕೂ ಹೆಚ್ಚಿನ ಮಕ್ಕಳನ್ನು ಜಿಲ್ಲಾಧಿಕಾರಿ ವಿಜಯ ಜ್ಯೊತ್ಸ್ನಾ ರಕ್ಷಣೆ ಮಾಡಿದ್ದಾರೆ. ವಿದ್ಯಾ ಶಕ್ತಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ವೇಳೆ ಬೇವಿನ ಬೀಜ ಮತ್ತು ಕಳೆ ತೆಗೆಯಲು ಮಕ್ಕಳನ್ನು ಬಳಸಲಾಗುತ್ತಿದ್ದ ಮಾಹಿತಿ ತಿಳಿದಿದೆ. ತಕ್ಷಣ ಎಚ್ಚೆತ್ತ ಜಿಲ್ಲಾಧಿಕಾರಿಗಳು ಮಕ್ಕಳನ್ನು ಕೆಲಸದ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದ ಲಗೇಜ್ ಆಟೋ ಸೀಜ್ ಮಾಡಿಸಿದ್ದಾರೆ. ಮಕ್ಕಳನ್ನು ಕೃಷಿ ಕೆಲಸಕ್ಕೆ ಸೇರಿಸಿದ್ರೆ ಕ್ರಮಿನಲ್ ಕೇಸ್ ದಾಖಲಿಸುವಂತೆ ಡಿಸಿ ವಿಜಯ ಜ್ಯೊತ್ಸ್ನಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಳಿಕ ಮಕ್ಕಳ ಮನೆಗೆ ತೆರಳಿದ ಜಿಲ್ಲಾಧಿಕಾರಿಗಳು ಪೊಷಕರಿಗೆ ಮಕ್ಕಳನ್ನು ಶಾಲೆಗೆ ಕಳಿಸುವಂತೆ ತಾಕೀತು ಮಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnew.tv