ಲಂಚ ಪಡೆಯುವ ಅಧಿಕಾರಿಗಳಿಗೆ ಮೈಚಳಿ ಬಿಡಿಸಿದ ಡಿಸಿ

ರಾಯಚೂರು: ಕಚೇರಿಯಲ್ಲಿ ಲಂಚ ತಿನ್ನುವ ಅಧಿಕಾರಿಗಳಿಗೆ‌ ಜಿಲ್ಲಾಧಿಕಾರಿಗಳು ಫುಲ್‌ ಕ್ಲಾಸ್ ತೆಗೆದುಕೊಂಡ ಪ್ರಸಂಗ ಜಿಲ್ಲೆಯಲ್ಲಿ ನಡೆಯಿತು. ರಾಯಚೂರು ಜಿಲ್ಲಾಧಿಕಾರಿ ಬಗಾದಿ ಗೌತಮ್, ಡಿಸಿ‌ ಕಚೇರಿ ಹಾಗೂ ನಗರಸಭೆಯ ವಿವಿಧ ವಿಭಾಗದ ಅಧಿಕಾರಿಗಳಿಗೆ ಫುಲ್‌ ಕ್ಲಾಸ್ ತೆಗೆದುಕೊಂಡ್ರು. ಅಧಿಕಾರಿಗಳು ಮಾಡಿದ ಕೆಲಸದ ಕುರಿತು ದಾಖಲಾತಿ ನೀಡುವಂತೆ ಡಿಸಿ ಕೇಳುತ್ತಾರೆ. ಆದರೆ ಅಧಿಕಾರಿಯೊಬ್ಬರು ಮಾಹಿತಿ ನೀಡಲು ತಡಬಡಾಯಿಸಿದ್ದಕ್ಕೆ ಫುಲ್​ ಕ್ಲಾಸ್​ ತೆಗದುಕೊಂಡರು. ಅಲ್ಲದೇ ಸರಿಯಾಗಿ‌ ಕಾರ್ಯ‌ನಿರ್ವಹಿಸದ‌ ಕೆಲ ಅಧಿಕಾರಿಗಳ ಅಮಾನತಿಗೆ‌ ಜಿಲ್ಲಾಧಿಕಾರಿ ಪಟ್ಟಿ ಕೂಡ ರೆಡಿ‌ ಮಾಡಿದ್ದಾರೆ ಎನ್ನಲಾಗ್ತಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv