ಭಾರತ ಬಂದ್ ಹಿನ್ನೆಲೆ, ದಾವಣಗೆರೆ ವಿವಿಯ ಪರೀಕ್ಷೆ ಮುಂದಕ್ಕೆ

ದಾವಣಗೆರೆ: ನಾಳೆ ಭಾರತ ಬಂದ್ ಹಿನ್ನೆಲೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನ ಮುಂದೂಡಲಾಗಿದೆ. ನಾಳೆ ಮತ್ತು ನಾಡಿದ್ದು ನಡೆಯ ಬೇಕಿದ್ದ ಸ್ನಾತಕ ಮತ್ತು ಸ್ನಾತಕೋತ್ತರ ಪರೀಕ್ಷಗಳನ್ನ ಮುಂದೂಡಲಾಗಿದೆ ಎಂದು ವಿವಿ ಮೌಲ್ಯಮಾಪನ ಕುಲಸಚಿವ ಡಾ.ಬಸವರಾಜ್ ಬಣಕಾರ ಮಾಹಿತಿ ನೀಡಿದ್ದಾರೆ.

ಮುಷ್ಕರದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಜನವರಿ 8, 9 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನ ಜ. 11 ರಂದು ನಡೆಸಲು ನಿರ್ಧಾರ ಮಾಡಲಾಗಿದೆ. ಅಂದು ಪರೀಕ್ಷೆಗಳ ಸಮಯ ಯಥಾ ಪ್ರಕಾರ ಇರಲಿದೆ ಎಂದು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv