ಆರೋಗ್ಯಕರ ಹೆಜ್ಜೆ ಇಟ್ಟ ಮಹಾನಗರ ಪಾಲಿಕೆ, ಪ್ಲಾಸ್ಟಿಕ್ ಗ್ಲಾಸ್ ಬದಲು ಸ್ಟಿಲ್ ಗ್ಲಾಸ್ ಬಳಕೆ..!

ದಾವಣಗೆರೆ: ಪ್ಲಾಸ್ಟಿಕ್ ಮಿತಿಮೀರಿದ ಬಳಕೆಯಿಂದ ಪರಿಸರದ ಮೇಲೆ ಹಾನಿಯಾಗುತ್ತಿರೋದ್ರಿಂದ ಸರ್ಕಾರಿ ಕಚೇರಿ, ಸೇರಿದಂತೆ ವಿವಿಧೆಡೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈಗ ಪ್ಲಾಸ್ಟಿಕ್ ನಿಷೇಧಕ್ಕೆ ದಾವಣಗೆರೆ ಮಹಾನಗರ ಪಾಲಿಕೆ ದಿಟ್ಟ ನಿರ್ಧಾರ ಕೈಗೊಂಡಿದೆ. ಪಾಲಿಕೆ ಸಭೆಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಬದಲು,ಸ್ಟಿಲ್ ಗ್ಲಾಸ್‌ಗಳನ್ನು ಬಳಕೆ ಮಾಡಿರುವುದು ಗಮನ ಸೆಳೆದಿದೆ. ಪಾಲಿಕೆಯ ಸಭಾಂಗಣದಲ್ಲಿ ಸ್ಟಿಲ್ ಗ್ಲಾಸ್‌ಗಳು ಕಂಡು ಬಂದಿದ್ದು, ಸಾವಿರಾರು ರೂಪಾಯಿ ವೆಚ್ಚಕ್ಕೆ ಪಾಲಿಕೆ ಕಡಿವಾಣ ಹಾಕಿದೆ. ಕಾಟಾಚಾರಕ್ಕೆ ಪ್ಲಾಸ್ಟಿಕ್ ನಿಷೇಧ ಪಾಲನೆ ಮಾಡುವವರ ಮಧ್ಯೆ ದಾವಣಗೆರೆ ಮಹಾನಗರ ಪಾಲಿಕೆ ನಿಜ ಅರ್ಥದಲ್ಲಿ ಜಾರಿಗೆ ತಂದಿದೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv