ಗಾಂಜಾ ಸೇವಿಸಿ ಸಿಕ್ಕಿಬಿದ್ದ ವೈದ್ಯಕೀಯ ವಿದ್ಯಾರ್ಥಿಗಳ ಪರಿವರ್ತನೆಗೆ ಮುಂದಾದ ಎಸ್ಪಿ

ದಾವಣಗೆರೆ: ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಎಂಬಿಬಿಎಸ್​​ ಮತ್ತು ಡೆಂಟಲ್​ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ 15 ವಿದ್ಯಾರ್ಥಿಗಳ ಹೆಸರು ಬಹಿರಂಗ ಪಡಿಸುವುದು ಬೇಡ. ವಿದ್ಯಾರ್ಥಿಗಳ ಪರಿವರ್ತನೆಗೆ ಕೌನ್ಸಲಿಂಗ್​ ಅಗತ್ಯವಿದೆ ಎಂದು ಎಸ್ಪಿ ಆರ್​​. ಚೇತನ್ ಹೇಳಿದ್ದಾರೆ.

ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂಧಿತ ಎಂಬಿಬಿಎಸ್ ಮತ್ತು ಡೆಂಟಲ್ ವೈದ್ಯಕೀಯ ವಿದ್ಯಾರ್ಥಿಗಳು. ಬಂಧಿತರಲ್ಲಿ ದಾವಣಗೆರೆ ಜಿಲ್ಲೆಯವರು ಯಾರೂ ಇಲ್ಲ. ಎಲ್ಲರೂ ಹೊರಗಿವರು, ಬೆಂಗಳೂರು, ಉಡುಪಿ, ಕೇರಳ ಹಾಗೂ ರಾಜ್ಯದ ವಿವಿಧ ಭಾಗದವರಿದ್ದಾರೆ. ಬಂಧಿತರಿಂದ ಗಾಂಜಾ ಸೊಪ್ಪು ಹಾಗೂ ಸೇವನೆಗೆ ಬಳಸಿದ ವಿವಿಧ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಮೆಡಿಕಲ್ ಟೆಸ್ಟ್​​ಗೆ ಕಳುಹಿಸುತ್ತಿದ್ದೇವೆ. ಬಂಧಿತ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸುತ್ತೇವೆ. ಕಳೆದ ವರ್ಷ NDPS act ನಲ್ಲಿ 15 ಪ್ರಕರಣಗಳು ದಾಖಲಾಗಿವೆ.

ಬಂಧಿತರು ಗಾಂಜಾ ಸಪ್ಲೈ ಮಾಡುತ್ತಿದ್ದ ಮೂರು ಜನರ ಹೆಸರನ್ನು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಅರೆಸ್ಟ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸರ್ಕಾರ ಜಿಲ್ಲೆಯಲ್ಲಿ ಗಾಂಜಾ ಹಾಗೂ NDPSಗೆ ಸಂಬಂಧಪಟ್ಟಂತೆ ಏನಾದರೂ ಮಾಹಿತಿ ಇದ್ದರೆ ಜಿಲ್ಲೆಯ CEN ಠಾಣೆಗೆ ಮಾಹಿತಿ ಕೊಡಬಹುದು ಎಂದು ಎಸ್ಪಿ ಆರ್. ಚೇತನ್ ಹೇಳಿದರು.

ಅಲ್ಲದೇ, ಬಂಧಿತರೆಲ್ಲ ವಿದ್ಯಾರ್ಥಿಗಳು ಆಗಿರುವುದರಿಂದ ಹೆಸರು ಬಹಿರಂಗ ಪಡಿಸುವುದು ಬೇಡ. ಬಂಧಿತ ವಿದ್ಯಾರ್ಥಿಗಳ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಪೋಷಕರ ಜೊತೆ ಚರ್ಚೆ ಮಾಡಲಾಗುವುದು. ಬಂಧಿತರು ವಿದ್ಯಾರ್ಥಿಗಳಾಗಿದ್ದರಿಂದಾಗಿ ಅವರ ಮನಃ ಪರಿವರ್ತನೆ ಮಾಡಲು ಪೋಷಕರಿಗೆ ಸೂಚಿಸಲು ಯತ್ನಿಸುತ್ತೇವೆ. ಈ ಪ್ರಕರಣ ದಾಖಲಿಸೋದು ಅಷ್ಟೇ ಅಲ್ಲದೇ, ವಿದ್ಯಾರ್ಥಿಗಳನ್ನು ಬದಲಾವಣೆ ಮಾಡಲು ಪೋಷಕರ ಜೊತೆ ಕೌನ್ಸಲಿಂಗ್ ಮಾಡಲಾಗುವುದು. ಬಂಧಿತ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ಅವಶ್ಯಕತೆಯಿದೆ ಎಂದ ಎಸ್ಪಿ ಆರ್ .ಚೇತನ್ ಸಮಾಜದ ಬದಲಾವಣೆಗೆ ಕೈಗನ್ನಡಿಯಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv