ದಾವಣಗೆರೆ: ಜಿಲ್ಲಾ ಕಾಂಗ್ರೆಸ್​​ಗೆ ಠಕ್ಕರ್ ಕೊಡಲು ಜೆಡಿಎಸ್ ಬಾಣ

ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಜಿಲ್ಲಾ ಜೆಡಿಎಸ್ ಬಾಣ ಬಿಟ್ಟಿದೆ, ಇಷ್ಟು ದಿನ ಸುಮ್ಮನಿದ್ದು ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೈತ್ರಿಯಾದರೆ ದಾವಣಗೆರೆ ಲೋಕಸಭೆ ಟಿಕೆಟ್ ನ್ನು ಯಾವೂದೇ ಕಾರಣಕ್ಕೂ ಕಾಂಗ್ರೆಸ್ ಗೆ ಬಿಟ್ಟು ಕೊಡುವುದಿಲ್ಲ ಎಂದು ಸವಾಲ್ ಎಸೆದಿದೆ. ಇನ್ನ ಈ ಕುರಿತು ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್, ಯಾವೂದೇ ಕಾರಣಕ್ಕೂ ಎಂಪಿ ಟಿಕೆಟ್ ನ್ನು ಕಾಂಗ್ರೆಸ್ ಗೆ ಬಿಟ್ಟುಕೊಡದಿರಲು ಇಂದು ನಡೆದ ಜೆಡಿಎಸ್ ಸಭೆಯಲ್ಲಿ ನಿರ್ಣಯಿಸಲಾಗಿದೆ. ಮಾರ್ಚ್​​ 3ರಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದ್ದು, ರಾಜ್ಯಾಧ್ಯಕ್ಷರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾದರೆ ಜೆಡಿಎಸ್ ಗೆ 12 ಸೀಟು ಬಿಟ್ಟುಕೊಡುವಂತೆ ವರಿಷ್ಠರು ನಿರ್ಣಯ ಕೈಗೊಂಡಿದ್ದಾರೆ, ಅದರಲ್ಲಿ ದಾವಣಗೆರೆಯನ್ನೂ ಸಹ ಸೇರಿಸಿ ಎಂದು ನಿಯೋಗ ಹೋಗಲಾಗುವುದು. ಈಗಾಗಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ್ ಮೂರು ಬಾರಿ ಪರಾಭವಗೊಂಡಿದ್ದಾರೆ, ಮತ್ತೆ ಅವರಿಗೆ ಟಿಕೆಟ್ ನೀಡಿದರೆ, ಫಲಿತಾಂಶವನ್ನು ಜನ ನಿರೀಕ್ಷೆ ಮಾಡೇ ಬಿಡುತ್ತಾರೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ನವರಿಗೆ ನಿರಾಸಕ್ತಿ ಇದೆ, ಆದ್ರೆ ನಮಗೆ ಆಸಕ್ತಿ ಇದೆ. ಹೀಗಾಗಿ ಪಕ್ಷದ ಉಳಿವಿಗಾಗಿ ನಾನು ಸ್ಪರ್ಧಿಸಲು ಸಿದ್ದ ಎಂದು ಹೆಚ್ ಎಸ್ ಶಿವಶಂಕರ್ ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv