ಐಎಎಸ್ ಜೋಡಿಗಳ ಮದುವೆ ಫಿಕ್ಸ್, ವೆಡ್ಡಿಂಗ್ ಕಾರ್ಡ್ ಬಿಡುಗಡೆ

ದಾವಣಗೆರೆ: ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಓ) ಅಶ್ವತಿ ಹಸೆಮಣೆ ಏರಲಿದ್ದಾರೆ. ಇವರಿಬ್ಬರ ಮದುವೆ ವೆಡ್ಡಿಂಗ್ ಕಾರ್ಡ್‌ ಮುಖಪ್ರತಿ ಬಿಡುಗಡೆಗೊಂಡಿದೆ.

ಫೆಬ್ರವರಿ 14ರಂದು ಅಶ್ವತಿ ಅವರ ಕೇರಳದ ನಿವಾಸದಲ್ಲಿ ಮದುವೆ ನಡೆಯಲಿದೆ. ಹಾಗೇ ಫೆಬ್ರವರಿ 17ರಂದು ಗೌತಮ್ ಅವರ ಆಂಧ್ರ ನಿವಾಸ ದಲ್ಲಿ ರಿಸೆಪ್ಷನ್ ಏರ್ಪಡಿಸಲಾಗಿದೆ. ಗೌತಮ್ 2009ನೇ ಐಎಎಸ್ ಬ್ಯಾಚ್‌ನವರಾಗಿದ್ದು, ಸಿಇಓ ಎಸ್.ಅಶ್ವತಿ 2013 ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ. ಗೌತಮ್ ಅವರು ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಇಬ್ಬರ ಕುಟುಂಬದವರ ಮಧ್ಯೆ ಮದುವೆ ಮಾತುಕತೆ ನಡೆದಿತ್ತು.

2016ರ ನವೆಂಬರ್​​ 24ರಂದು ದಾವಣಗೆರೆ ಸಿಇಓ ಆಗಿ ಅಶ್ವತಿ ಅಧಿಕಾರ ಸ್ವೀಕರಿಸಿದ್ದರು. 2018ರ ಅಕ್ಟೋಬರ್‌ನಲ್ಲಿ ಡಾ.ಬಗಾದಿ ಗೌತಮ್ ದಾವಣಗೆರೆ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಉತ್ತಮವಾಗಿ ಕಾರ್ಯನಿರ್ವಹಿಸಿದಕ್ಕೆ ಗೌತಮ್ ಹಾಗೂ ಅಶ್ವತಿ ಅವರು ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದರು.

ರಾಜ್ಯದ ಪ್ರಮುಖ ಐಎಎಸ್ ಅಧಿಕಾರಿಯೊಬ್ಬರ ಮುಂದಾಳತ್ವದಲ್ಲಿ ಎರಡು ಕುಟುಂಬದ ಮಧ್ಯೆ ಮದುವೆ ಮಾತುಕತೆ ನಡೆಿದಿತ್ತು ಎಂದು ತಿಳಿದುಬಂದಿದೆ. ಪ್ರೇಮಿಗಳ ದಿನದಂದೇ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿರುವುದು ವಿಶೇಷ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv