ಧೋನಿ ಮಿ.ಪರ್ಫೆಕ್ಟ್ ಆಗಿದ್ದು ಯಾರಿಂದ ಗೊತ್ತಾ..?

ಒಬ್ಬ ಮನುಷ್ಯ ಪರಿಪೂರ್ಣ ವ್ಯಕ್ತಿ ಆಗ್ಬೇಕಂದ್ರೆ ಅವರ ಹಿಂದೆ ಒಬ್ರು ಮಾಸ್ಟರ್ ಇರಲೇ ಬೇಕು. ಹಾಗಿದ್ದಾಗ ಮಾತ್ರ ಓರ್ವ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ. ಇನ್ನು ಒಬ್ಬ ಮನುಷ್ಯನ ಜೀವನದ ಬದಲಾವಣೆಗೆ ನಾನಾ ಕಾರಣಗಳು ಸಹ ಇರುತ್ತವೆ. ಅದ್ರಂತೆ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಬದಲಾವಣೆ ಹಾಗೂ ಸಂತೋಷದ ಹಿಂದೆ ಒಬ್ರು ಇದ್ದಾರೆ.

ಧೋನಿ ಬದಲಾವಣೆಗೆ ಜೀವಾ ಸ್ಫೂರ್ತಿ
ಮಹೇಂದ್ರ ಸಿಂಗ್ ಧೋನಿಯಷ್ಟೇ ಅವರ ಮಗಳು ಜೀವಾ ಸಹ ಸೆಲೆಬ್ರಿಟಿ. ಐಪಿಎಲ್​​​​​​​​​​​​​ನುದ್ದಕ್ಕೂ ಚೆನ್ನೈ ತಂಡವನ್ನ ಚಿಯರ್​​ ಮಾಡಿದ್ದ ಜಿವಾ ತಮ್ಮ ತಂದೆ ಧೋನಿಯನ್ನ ಪರಿಪೂರ್ಣ ವ್ಯಕ್ತಿಯಾಗಿ ಬದಲಾಯಿಸಿದ್ದಾಳಂತೆ. ಹೀಗಂತ ಸ್ವತಃ ಧೋನಿಯೇ ಹೇಳಿದ್ದಾರೆ.

ಜೀವಾ ಬಗ್ಗೆ ಧೋನಿ ಹೇಳಿದ್ದೇನು?
‘ವ್ಯಕ್ತಿಯಾಗಿ ಮಗಳಿಂದ ಸಾಕಷ್ಟು ಕಲಿತಿರುವೆ. ನನಗೆ ಗೊತ್ತಿಲ್ಲದಂತೆ ಬದಲಾಗುತ್ತಿದ್ದೇನೆ ಎನಿಸುತ್ತಿದೆ. ಹೆಣ್ಣು ಮಕ್ಕಳು ಸಹಜವಾಗಿ ತಂದೆಗೆ ತುಂಬ ಹತ್ತಿರವಾಗುತ್ತಾರೆ. ಮಗಳಿಂದ ನಾನಂತೂ ಬದಲಾಗುತ್ತಿದ್ದೇನೆ. ಅದು ವ್ಯಕ್ತಿಯಾಗಿಯೋ ಅಥವಾ ಕ್ರಿಕೆಟಿಗನಾಗಿಯೋ ಗೊತ್ತಿಲ್ಲ. ಕ್ರಿಕೆಟ್‌ನಿಂದಾಗಿ ಬಹುತೇಕ ಸಂದರ್ಭದಲ್ಲಿ ಮಗಳ ಜತೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಪಂದ್ಯದ ನಂತರ ಆಕೆಯ ಜತೆ ಸಮಯ ಕಳೆಯುವುದನ್ನು ತಪ್ಪಿಸುತ್ತಿರಲಿಲ್ಲ. ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಗ್ರೌಂಡ್‌ಗೆ ಹೋಗಬೇಕೆನ್ನುವುದು ಆಕೆಯ ಇಚ್ಛೆಯಾಗಿತ್ತು. ಅದರಂತೆ ಆಕೆಯನ್ನು ಪಂದ್ಯದ ಬಳಿಕ ಅಲ್ಲಿಗೆ ಕರೆದೊಯ್ಯುತ್ತಿದೆ. ಅಲ್ಲಿ ಸಮಯ ಕಳೆಯುವುದು ಆಕೆಗೆ ಖುಷಿ ಕೊಡುತ್ತಿತ್ತು. ಇನ್ನು ಆಕೆ ಊಟ ಮಾಡದೇ ಇದ್ದಾಗ, ಹಠ ಮಾಡಿದಾಗ ಅಪ್ಪ ಬರುತ್ತಾರೆ ಊಟ ಮಾಡು, ಇಲ್ಲವೇ ಸುಮ್ಮನಿರು ಅಂದ್ರೆ ಸಾಕು ಜೀವಾ ಸೈಲೆಂಟ್ ಆಗ್ತಿದ್ದಳು’ ಅಂತ ಧೋನಿ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.