ನದಿಯಲ್ಲಿ ಈಜಲು ಹೋಗಿ ನೀರು ಪಾಲಾದ ತಾಯಿ ಮಗಳು

ಶಿವಮೊಗ್ಗ: ನದಿಯಲ್ಲಿ ಪತಿ ಹಾಗೂ ಮಕ್ಕಳೂಂದಿಗೆ ಈಜಾಡಲು ತೆರಳಿದಾಗ ತಾಯಿ- ಮಗಳು ನೀರು ಪಾಲಾದ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ನದಿಯಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಚಂದ್ರಕುಮಾರಿ (37) ಹಾಗೂ ಮಗಳು ಸಂಧ್ಯಾ (17) ನೀರು ಪಾಲಾದ ದುರ್ದೈವಿಗಳು. ರಜೆಯಿದ್ದ ಕಾರಣ ಪ್ರವಾಸಕ್ಕಾಗಿ ತೀರ್ಥಹಳ್ಳಿಗೆ ತೆರಳಿದ್ದರು. ನದಿಯಲ್ಲಿ ಪತಿ ಹಾಗೂ ಮಕ್ಕಳೂಂದಿಗೆ ಈಜಾಡಲು ತೆರಳಿದಾಗ ಈ ದುರಂತ ನಡೆದಿದೆ. ಚಂದ್ರಕುಮಾರಿ ಪತಿ ಶಿವಮೊಗ್ಗದ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಘಟನೆ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv