ದಸರಾ ಏರ್​ಶೋ: ಯುದ್ಧ ವಿಮಾನಗಳು ಭಾಗಿ, ಸ್ಕೈಡೈವಿಂಗ್​

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಏರ್​ ಶೋಗೆ ವಿಮಾನಯಾನ ಸಂಸ್ಥೆ ಅನುಮತಿ ನೀಡಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಬನ್ನಿಮಂಟಪದಲ್ಲಿ ಏರ್​ ಶೋ ಅಣಕು ಪ್ರದರ್ಶನ ನಡೆಯಲಿದೆ.
ಅ. 14ರಂದು ಭಾನುವಾರ ಈ ಬಾರಿಯ ದಸರಾ ಏರ್​ ಶೋನಲ್ಲಿ ಏರ್​ಫೋರ್ಸ್​​ನ ಎರಡು ಯುದ್ಧ ವಿಮಾನಗಳು ಭಾಗಿಯಾಗಲಿವೆ. 1130 ಅಡಿ ಎತ್ತರದಿಂದ ಸ್ಕೈಡೈವಿಂಗ್​, 1120 ಅಡಿ ಎತ್ತರದಿಂದ ಹಗ್ಗದ ಮೂಲಕ ವಿಮಾನ ಇಳಿಯುವ ಪ್ರದರ್ಶನ ನಡೆಯಲಿದೆ. ಇದೇ ವೇಳೆ, 1105 ಅಡಿ ಎತ್ತರದಿಂದ ಪುಷ್ಪಾರ್ಚನೆ ನಡೆಯಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv