ಪ್ರೈಮ್​ನಲ್ಲಿ ‘ಯಜಮಾನ’ ವೀಕ್ಷಿಸಿದ ದರ್ಶನ್​ ಪತ್ನಿ..!

ಯಜಮಾನ.. ‘ಚಾಲೆಂಜಿಂಗ್ ಸ್ಟಾರ್​’ ದರ್ಶನ್​ ನಟನೆಯ ವರ್ಷದ ಸೂಪರ್ ಹಿಟ್​ ಸಿನಿಮಾ. ಎರಡು ವರ್ಷಗಳ ಗ್ಯಾಪ್​ ನಂತರ ದಚ್ಚುಗೆ ಬ್ರೇಕ್​ ಕೊಟ್ಟ ಸಿನಿಮಾ. ಕ್ಲಾಸ್​- ಮಾಸ್ ಪ್ರೇಕಕರಿಗೆ ‘ಯಜಮಾನ’ ಸಿಕ್ಕಾಪಟ್ಟೆ ಖುಷಿ ಕೊಟ್ಟಿತ್ತು. ದುಬಾರಿ ಬಜೆಟ್​ ಜೊತೆಗೆ ಗಲ್ಲಾ ಪೆಟ್ಟಿಗೆಯಲ್ಲೂ, ದುಬಾರಿ ಕಲೆಕ್ಷನ್ ಗಿಟ್ಟಿಸಿತ್ತು. ಆಗ ಥಿಯೇಟರ್​ನಲ್ಲಿ ಅಬ್ಬರಿಸಿದ್ದ ಯಜಮಾನ.. ಈಗ ಅಂತರ್ಜಾಲದಲ್ಲಿ ಅಬ್ಬರಿಸೋಕೆ ಬಂದಿದ್ದಾರೆ. ಅರ್ಥಾತ್​ ಪ್ರೈಮ್​ ವೀಡಿಯೊನಲ್ಲಿ ‘ಯಜಮಾನ’ ಬಿಡುಗಡೆಯಾಗಿದ್ದು, ಸಿನಿಮಾ ನೋಡುವಂತೆ ದರ್ಶನ್​ ಪತ್ನಿ ವಿಜಯಲಕ್ಷ್ಮಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

50ನೇ ದಿನದತ್ತ ಯಜಮಾನ..!
ಯಜಮಾನ ಬಿಡುಗಡೆಯಾಗಿ ಇಂದಿಗೆ 45ನೇ ದಿನ. ಸಿನಿಮಾ ಹಾಫ್​ ಸೆಂಚುರಿ ಬಾರಿಸುವ ಹೊಸ್ತಿಲಲ್ಲೇ ಪ್ರೈಮ್​ ವೀಡಿಯೊದಲ್ಲಿ ‘ಯಜಮಾನ’ ರಿಲೀಸ್ ಆಗಿದೆ. ದರ್ಶನ್​ ಬಾಕ್ಸ್ ಆಫೀಸ್​ ಸುಲ್ತಾನ್​ ಮಾತ್ರವಲ್ಲ, ಅಂತರ್ಜಾಲದಲ್ಲೂ ಸುಲ್ತಾನ್​. ಯಾಕೆಂದ್ರೆ ದರ್ಶನ್​ ನಟನೆಯ ಯಾವುದೇ ಸಿನಿಮಾದಲ್ಲಿ ಅಂತರ್ಜಾಲದಲ್ಲಿ ಬಿಡುಗಡೆಯಾದ್ರೆ ದಾಖಲೆ ವೀಕ್ಷಣೆ ಪಡೆಯುತ್ತದೆ. ಅದರಂತೆ ಯಜಮಾನ ಕೂಡ ದಾಖಲೆ ಬರೆಯುವ ಸೂಚನೆ ನೀಡಿದೆ. ಇನ್ನು ಪ್ರೈಮ್​ ವೀಡಿಯೊದಲ್ಲಿ ಸಿನಿಮಾ ವೀಕ್ಷಿಸಿರುವ ವಿಜಯಲಕ್ಷ್ಮಿ ನೀವು ನೋಡಿ ಆನಂದಿಸಿ ಅಂತಾ ಟ್ವೀಟ್ ಮಾಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv