ಚಿತ್ರದುರ್ಗಕ್ಕೆ ಹೊರಟ ದರ್ಶನ್​​​, ರಾಕ್​ಲೈನ್ ವೆಂಕಟೇಶ್​

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹಾಗೂ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ನಾಳೆ ಚಿತ್ರದುರ್ಗಕ್ಕೆ ಭೇಟಿ ನೀಡ್ತಾ ಇದ್ದಾರೆ. ಅಲ್ಲದೇ, ಚಿತ್ರದುರ್ಗದ ಮುರಘಾ ಮಠಕ್ಕೆ ಭೇಟಿ ನೀಡ್ತಿದ್ದಾರೆ. ನಾಳೆಯಿಂದ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಆರಂಭವಾಗ್ತಿದ್ದು, ಈ ಉತ್ಸವದ ಚಾಲನೆಗೆ ದರ್ಶನ್​ ಹಾಗೂ ರಾಕ್​ಲೈನ್ ವೆಂಕಟೇಶ್​ ಮಠಕ್ಕೆ ಭೇಟಿ ನೀಡ್ತಾ ಇದ್ದಾರೆ. ಚಿತ್ರದುರ್ಗದ ವೀರ ಮದಕರಿ ನಾಯಕರ ಸಿನಿಮಾ ವಿಷಯ ಸದ್ಯ ರಾಜ್ಯದೆಲ್ಲಡೆ ಕಾವೇರಿದ್ದು, ಈ ಸಂದರ್ಭದಲ್ಲಿ ದರ್ಶನ್​​ರ ಚಿತ್ರದುರ್ಗ ಪ್ರವಾಸ ಹಾಗೂ ಮುರಘಾ ಶರಣರ ಭೇಟಿ ಮಹತ್ವ ಪಡೆದುಕೊಳ್ತಾ ಇದೆ. ​​ಸುದೀಪ್​​ ಮದಕರಿ ನಾಯಕರ ಪಾತ್ರ ಮಾಡಲಿ ಅಂತಾ ವಾಲ್ಮಿಕಿ ಜನಾಂಗದ ಸ್ವಾಮೀಜಿ ಹೇಳ್ತಾ ಇರೋ ಸಂದರ್ಭದಲ್ಲಿ ದುರ್ಗದ ಮತ್ತೊಂದು ಪ್ರತಿಷ್ಟಿತ ಮಠಕ್ಕೆ ದರ್ಶನ್​​ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv