ಬಿಚ್ಚುಗತ್ತಿ ಫಸ್ಟ್‌ಲುಕ್‌ ರಿಲೀಸ್ ಮಾಡ್ತಾರೆ ಬಾಕ್ಸ್ ಆಫೀಸ್ ಸುಲ್ತಾನ್‌!

ಕನ್ನಡ ಚಿತ್ರರಂಗದ ಮತ್ತೊಂದು ಐತಿಹಾಸಿಕ ಚಿತ್ರ ಬಿಚ್ಚುಗತ್ತಿ. ಹರಿ ಸಂತೋಷ್ ನಿರ್ದೇಶನದ ಬಿಚ್ಚುಗತ್ತಿ 15ನೇ ಶತಮಾನದ ಬಿಚ್ಚುಗತ್ತಿ ಭರಮಣ್ಣ ನಾಯಕನ ಜೀವನಾಧಾರಿತ ಚಿತ್ರ. ಬಿ.ಎಲ್. ವೇಣು ಅವರ ಕಥೆ ಆಧಾರಿತ ಸಿನಿಮಾವಾಗಿದ್ದು, ಹಿರಿಯ ನಟ ಡಿಂಗ್ರಿ ನಾಗರಾಜ್ ಮಗ ರಾಜವರ್ಧನ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಚಿತ್ರದ ನಾಯಕಿಯಾಗಿ ಹರಿಪ್ರಿಯಾ ಬಣ್ಣ ಹಚ್ಚಿದ್ದು, ಹೊಸ ಪಾತ್ರವನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ವಿಶೇಷ ಅಂದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಫೆಬ್ರವರಿ 15ರಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ ಬಿಡುಗಡೆ ಮಾಡಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ದರ್ಶನ್ ಅವರೇ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ಕೊಟ್ಟಿದ್ರು. ಈಗ ಪೋಸ್ಟರ್ ಕೂಡ ರಿಲೀಸ್ ಮಾಡ್ತಿದ್ದಾರೆ.

2 ಭಾಗಗಳಲ್ಲಿ ಬರ್ತಿರೋ ಸಿನಿಮಾ!
ಚಿತ್ರ 2 ಚಾಪ್ಟರ್‌ಗಳಲ್ಲಿ ಬರಲಿದ್ದು ಎರಡು ಹಂತಗಳಲ್ಲಿ ಶೂಟಿಂಗ್ ಮುಗಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಬಹುಭಾಗದ ಚಿತ್ರೀಕರಣವನ್ನು ಚಿತ್ರದುರ್ಗದ ಸುತ್ತಮುತ್ತ ಸೆಟ್​ ಹಾಕಿ ಚಿತ್ರೀಕರಿಸಲಾಗುತ್ತಿದೆ. ಪೋಸ್ಟರ್‌ನಲ್ಲಿ ಚಿತ್ರಕಥೆಯ ಹಿನ್ನೆಲೆಯನ್ನ ವಿವರವಾಗಿ ಬರೆದು ಎಲ್ಲರ ಗಮನ ಸೆಳೆದಿತ್ತು ಚಿತ್ರತಂಡ. ಸದ್ಯ ಫಸ್ಟ್ ಲುಕ್‌ ಪೋಸ್ಟರ್‌ ರೆಡಿಯಿದ್ದು ಐತಿಹಾಸಿಕ ಚಿತ್ರದ ಮೊದಲ ನೋಟ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.