ಆಸ್ಪತ್ರೆ ಎದುರು ಸೌಜನ್ಯತೆ ಮೆರೆದ ದರ್ಶನ್​..!

ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್​ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇವತ್ತೂ ಕೂಡ ಕೆ.ಆರ್​. ನಗರದ ಸುತ್ತಮುತ್ತ ದರ್ಶನ್ ಕ್ಯಾಂಪೇನ್​ನಲ್ಲಿ ಭಾಗಿಯಾಗಿದ್ದರು. ಹತ್ತಾರು ಗ್ರಾಮಗಳಿಗೆ ದರ್ಶನ್ ಭೇಟಿ ಕೊಟ್ಟು ಮತಯಾಚಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಸೌಜನ್ಯತೆಯಿಂದ ಮೆಚ್ಚುಗೆಗೆ ಕಾರಣರಾದರು.

ಆಸ್ಪತ್ರೆ ಇದೆ ಚೀರಾಡಬೇಡಿ..!
ಕೆ.ಆರ್​.ನಗರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಾಲೆಂಜಿಂಗ್​ ಸ್ಟಾರ್​ ಕ್ಯಾಂಪೇನ್ ನಡೆಸುತ್ತಿದ್ದಾರೆ. ಹೀಗೆ ಹಳ್ಳಿಯೊಂದರಲ್ಲಿ ಪ್ರಚಾರಕ್ಕೆ ತೆರಳಿದಾಗ ಅಭಿಮಾನಿಗಳು ದಚ್ಚುಗೆ ಜೈಕಾರ ಹಾಕಿದ್ರು. ಆದರೆ ಪಕ್ಕದಲ್ಲಿ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರ ಇರೋದನ್ನು ಗಮನಿಸಿದ ದರ್ಶನ್​, ಜೋರಾಗಿ ಚೀರಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ರು. ದಚ್ಚುವಿನ ಸೌಜನ್ಯತೆ ಮೆಚ್ಚಿದ ಅಭಿಮಾನಿಗಳು, ಚೀರಾಡದೇ ಕ್ಯಾಂಪೇನ್​ಗೆ ಸಹಕರಿಸಿದ್ರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv