ಜೋಡೆತ್ತಿನ ಗಾಡಿ ಓಡಿಸಿದ​ ದರ್ಶನ್

ಮಂಡ್ಯ: ಮಂಡ್ಯ ಲೋಕಸಭಾ ಅಭ್ಯರ್ಥಿ ಸುಮಲತಾ ಅಂಬರೀಶ್​​ ಪರವಾಗಿ ಜೋಡೆತ್ತುಗಳಂತೆ ಕೆಲಸ ಮಾಡ್ತೀವಿ ಅಂತ ಚಾಲೆಂಜಿಂಗ್ ಸ್ಟಾರ್​ ದರ್ಶನ್​​ ಹಾಗೂ ರಾಕಿಂಗ್ ಸ್ಟಾರ್​ ಯಶ್​​ ಹೇಳಿದ ಬಳಿಕ ಇಬ್ಬರೂ ಜೋಡೆತ್ತುಗಳೆಂದೇ ಫೇಮಸ್​​ ಆಗಿದ್ದಾರೆ. ಈ ಮಧ್ಯೆ ಜೋಡೆತ್ತು, ಕಳ್ಳೆತ್ತು, ಕುಂಟೆತ್ತು  ಅನ್ನೋ ರಾಜಕೀಯ ಕೆಸರೆರಚಾಟವೂ ನಡೆಯಿತು. ಆದ್ರೂ ಯಶ್​ ಹಾಗೂ ದರ್ಶನ್​​ ನಿಜವಾದ ಜೋಡೆತ್ತುಗಳಂತೆ ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರದಲ್ಲಿ ನಿರತರಾಗಿದ್ದಾರೆ.  ಇಂದು ಚಾಲೆಂಜಿಂಗ್​ ಸ್ಟಾರ್​ ದರ್ಶನ್​  ಸುಮಲತಾ ಪರ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಇಂಡುವಾಳು ಗ್ರಾಮದಲ್ಲಿ ಪ್ರಚಾರ ನಡೆಸಿದ್ರು. ಈ ವೇಳೆ ದಚ್ಚು ಅಭಿಮಾನಿಗಳು ಅವರನ್ನ ಎತ್ತಿನಗಾಡಿ ಓಡಿಸಲು ಒತ್ತಾಯಿಸಿದರು. ನಂತರ ದರ್ಶನ್ ಎತ್ತಿನಗಾಡಿ ಏರಿ ಸ್ವಲ್ಪ ದೂರದವರೆಗೂ ಜೋಡೆತ್ತಿನ ಗಾಡಿ ಓಡಿಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv