ದಾಸ ದರ್ಶನ್​ ಗರಡಿಯಿಂದ ಬಂದ ಹುಡುಗನ ಟಕ್ಕರ್​..!

ಸಿನಿಮಾ ಕುಟುಂಬದಿಂದಲೇ ಬಂದ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಹಾಗೂ ಅವ್ರ ಸಹೋದರ ದಿನಕರ್​ ತೂಗುದೀಪ. ಈಗ ಅವ್ರ ಅಕ್ಕನ ಮಗ ಮನೋಜ್​ ಅಭಿನಯದ ಟಕ್ಕರ್​ ಸಿನಿಮಾ ರಿಲೀಸ್​ಗೆ ರೆಡಿಯಾಗಿದ್ದು, ಸಿನಿಮಾದ ಮೊದಲ ಟೀಸರ್​ ರಿಲೀಸ್​ ಆಗಿದೆ. ಪಕ್ಕಾ ಉತ್ತರ ಕನ್ನಡ ಹುಡುಗನ ಗೆಟಪ್​ನಲ್ಲಿ ಎಂಟ್ರಿ ಕೊಟ್ಟಿರೋ ಮನೋಜ್​, ದರ್ಶನ್​ ಥರವೇ ಕಂಪ್ಲೀಟ್​ ಆ್ಯಕ್ಷನ್​ ಖದರ್​ನ ಜೊತೆಗೆ ಅಖಾಡಕ್ಕೆ ಇಳಿತಾ ಇದ್ದಾರೆ ಅನ್ನೋದಕ್ಕೆ ಟೀಸರ್ರೇ ಸಾಕ್ಷಿ. ಮನೋಜ್​ ನೋಡದಕ್ಕೆ ಥೇಟ್​ ದರ್ಶನ್​ ಥರವೇ ಕಾಣ್ತಾ ಇದ್ದು, ಅದೇ ಹೈಟು, ಅದೇ ಪರ್ಸನಾಲಿಟಿಯಿಂದ ಟೀಸರ್​ನಲ್ಲಿ ಗಮನ ಸೆಳೀತಾರೆ. ಈ ಹಿಂದೆ ಮನೋಜ್​ ದರ್ಶನ್​ರ ಹಲವು ಸಿನಿಮಾಗಳಲ್ಲಿ ನಟಿಸಿದ್ರು.
ಪುಟ್​ ಗೌರಿ ಹುಡುಗನ ಆ್ಯಕ್ಷನ್​​ ಟಕ್ಕರ್​..!
ಟೀಸರ್​​ನಲ್ಲೇ ಈ ಡೈಲಾಗ್​ ಇದೆ ಅಂದಮೇಲೆ ಸಿನಿಮಾದಲ್ಲೂ ಈ ರೀತಿನೇ ಪಂಚ್​ ಡೈಲಾಗ್​ಗಳ ಸುರಿಮಳೆ ಇರುತ್ತೆ. ಟಕ್ಕರ್​ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಾ ಇರೊ ಮನೋಜ್​ಪಾಪ್ಯುಲರ್​ ಧಾರಾವಾಹಿಯಾಗಿದ್ದ ಪುಟ್​ ಗೌರಿ ಮದುವೆಯ ನನಾಯಕಿ ರಂಜಿನಿ ರಾಘವನ್​ ನಾಯಕಿ. ರಂಜಜಿನಿ ಈ ಮೊದಲು ಕೂಡ ಒಂದು ಸಿನಿಮಾಕ್ಕೆ ನಾಯಕಿಯಾಗಿದ್ರು, ಇದು ಅವ್ರ 2ನೇ ಸಿನಿಮಾ. ಇನ್ನೂ ಸಿನಿಮಾಕ್ಕೆ ಮಂನಿಕಾಂತ್​​ ಕದ್ರಿ ಮ್ಯೂಸಿಕ್​ ಕಂಪೋಸ್​ ಮಾಡಿದ್ದು, ರನ್​ ಆ್ಯಂಟನಿ ನಿರ್ದೇಶಕ ರಘು ಶಾಸ್ತ್ರಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ನಾಗೇಶ್ ​ಕೋಗಿಲು ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.

 

https://www.youtube.com/watch?v=IKWi_BeCYe0