ಸದಾ ನಮ್ಮೊಂದಿಗೆ ಡಾ.ರಾಜ್ -ದರ್ಶನ್ ನಮನ

ಇಂದು ವರನಟ ಡಾ.ರಾಜ್‌ಕುಮಾರ್ ಅವರ 13ನೇ ಪುಣ್ಯಸ್ಮರಣೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜ್‌ಕುಮಾರ್ ಅವರನ್ನ ನೆನೆದಿದ್ದು ಟ್ವೀಟ್ ಮಾಡಿದ್ದಾರೆ. ‘ಕಲೆಯನ್ನೇ ಉಸಿರಾಗಿಸಿಕೊಂಡು ಕನ್ನಡ ಚಿತ್ರರಂಗಕ್ಕೆ ಆಲದ ಮರದ ನೆರಳಿನಂತೆ ನೆರವಾದ ಅಣ್ಣಾವ್ರ ಪುಣ್ಯ ತಿಥಿ ಇಂದು. ಸದಾ ನಮ್ಮೊಂದಿಗೆ ಡಾ. ರಾಜ್ ‘ಅಂತಾ ಟ್ವೀಟ್ ಮಾಡಿದ್ದಾರೆ.

ಇಂದು ಬೆಳಗ್ಗೆ ರಾಜ್ ಕುಮಾರ್ ಕುಟುಂಬದವರು ಕಂಠೀರವ ಸ್ಟುಡಿಯೋಗೆ ತೆರಳಿ ರಾಜ್ ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಜ್ ಕುಮಾರ್ ಕುಟುಂಬದ ಜೊತೆ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಈಗ ಅದೇ ಸಂಬಂಧವನ್ನು ದರ್ಶನ್ ಕೂಡ ಮುಂದುವರೆಸಿಕೊಂಡು ಬಂದಿದ್ದಾರೆ. ದರ್ಶನ್‌ಗೆ ಮೊದಲಿಂದಲೂ ಡಾ. ರಾಜ್‌ಕುಮಾರ್ ಅವರೆಂದ್ರೆ ವಿಶೇಷ ಅಭಿಮಾನ. ಸದ್ಯ ಲೋಕಸಭಾ ಚುನಾವಣೆಗಾಗಿ ಮಂಡ್ಯದಲ್ಲಿ ಸುಮಲತಾ ಪರವಾಗಿ ಪ್ರಚಾರದಲ್ಲಿ ದರ್ಶನ್ ಬ್ಯುಸಿಯಿದ್ರೂ ಈ ವಿಷಯವನ್ನ ಮರೆಯದೇ ಮೇರುನಟನ ಸ್ಮರಣೆ ಮಾಡಿದ್ದಾರೆ.