ಗೋವಿನ ಹಾಲು ಕರೆದ ದರ್ಶನ್

ಮಂಡ್ಯ: ನಟ ದರ್ಶನ್​​ ಕೆ.ಆರ್. ಪೇಟೆ ತಾಲೂಕಿನ ಸೋಮನಹಳ್ಳಿಯಲ್ಲಿ ಹಾಲು ಕರೆದಿದ್ದಾರೆ. ಈ ಮೂಲಕ ದರ್ಶನ್ ರೈತರ ಕಷ್ಟದ ಬಗ್ಗೆ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ, ನಿಖಿಲ್​ ಕುಟುಂಬಕ್ಕೆ ತಿರುಗೇಟು ನೀಡಿದ್ದಾರೆ.  ಇಂದು ದರ್ಶನ್, ಸುಮಲತಾ ಅಂಬರೀಶ್​ ಪರ ಕೆ.ಆರ್.ಪೇಟೆ ತಾಲೂಕಿನ ಸೋಮನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಅದೆ  ಗ್ರಾಮದ ಕುಮಾರ್ ಎಂಬ ರೈತರ ಹಸುವಿನಿಂದ ಹಾಲು‌ ಕರೆದಿದ್ದಾರೆ. ಇನ್ನು ಗಮರ್ನಾಹ ವಿಷಯವೆಂದರೆ ನಟ ದರ್ಶನ್​ ತಮ್ಮದೇ ಫಾರ್ಮ್​  ಹೌಸ್​ನಲ್ಲಿ ಹಲವು ಸಾಕು ಪ್ರಾಣಿಗಳನ್ನ ಸಾಕಾಣಿಕೆ ಮಾಡುತ್ತಿದ್ದಾರೆ.

 


 

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv