ಮಳವಳ್ಳಿಯಲ್ಲಿ ಚಾಲೆಂಜಿಂಗ್​ ಸ್ಟಾರ್, ದರ್ಶನ್​​ಗಾಗಿ ಮುಗಿಬಿದ್ದ ಜನ..!

ಮಂಡ್ಯ:  ಮಳವಳ್ಳಿ ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್,  ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಪರ ಭರ್ಜರಿ  ಪ್ರಚಾರ ಆರಂಭಿಸಿದ್ದಾರೆ. ಗ್ರಾಮದೆಲ್ಲೆಡೆ ದರ್ಶನ್​ಗೆ ಅಭಿಮಾನಿಗಳ  ಜೈಕಾರ ಮುಗಿಲು ಮುಟ್ಟಿದ್ದು, ಪ್ರಚಾರಕ್ಕೆ ಜನ ಸಾಗರವೇ ಹರಿದುಬಂದಿದೆ. ಇನ್ನು ಇಂದು ಮಳವಳ್ಳಿಯಲ್ಲಿ  ಮೈತ್ರಿ ಸಭೆ ನಡೆಯುತ್ತಿದ್ದು, ಮೈತ್ರಿ ಸಭೆಗೆ ದಚ್ಚು ಸೆಡ್ಡು ಹೊಡೆದಿದ್ದಾರೆ. ದರ್ಶನ್​ ನೋಡಲು ಸಾವಿರಾರು ಅಭಿಮಾನಿಗಳು ಬಂದು ಸೇರಿದ್ದು, ಪ್ರಚಾರಕ್ಕೆ ಬಿಜೆಪಿ ನಾಯಕರು ಸಾಥ್​ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv