ಪವಾಡನಾ..? ಮೂಕ ಬಸವನ ಆಟನಾ? ದಚ್ಚು ಮೈ ಸವರುತ್ತಿದ್ದಂತೆ ಸೈಡ್​ಗೆ ಹೋದ ಹೋರಿ..!

ಪ್ರಾಣಿ ಪ್ರಿಯ, ಪಕ್ಷಿ ಪ್ರೇಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಪರಿಸರದ ಮೇಲಿರುವ ಕಾಳಜಿ, ಪ್ರಾಣಿ-ಪಕ್ಷಗಳ ಮೇಲೆ ಅವರು ಇಟ್ಟಿರೋ ಪ್ರೀತಿ ಬಗ್ಗೆ ಆಗಾಗ ಕೇಳುತ್ತಲೇ ಇರ್ತೇವೆ. ಪ್ರಾಣಿಗಳ ಮೇಲೆ ಪ್ರೀತಿ ಇಟ್ಕೊಂಡಿರುವ ದರ್ಶನ್​​​, ನಿನ್ನೆ ಅಚ್ಚರಿಯ ಕ್ಷಣವೊಂದಕ್ಕೆ ಸಾಕ್ಷಿಯಾದರು.

ಬಸವಣ್ಣನ ನೋಡಿ ವಾಹನದ ಮೇಲಿಂದ ಇಳಿಯುತ್ತಿರುವ ದರ್ಶನ್

ಪ್ರಾಣಿಗಳ ಸಿಕ್ಸ್ತ್​​ ಸೆನ್ಸ್​ ಚೆನ್ನಾಗಿ ಕೆಲಸ ಮಾಡ್ತವೆ. ಅವುಗಳು ಯಾರು ಏನು ಅನ್ನೋದನ್ನ ಚೆನ್ನಾಗಿ ಅರಿತಿರುತ್ತವೆ ಅನ್ನೋದಕ್ಕೆ ಮಂಡ್ಯ ಜಿಲ್ಲೆ ಕೆ.ಆರ್​.ನಗರದಲ್ಲಿ ನಡೆದ ಈ ಘಟನೆಯೇ ನಿದರ್ಶನ. ಸುಮಲತಾ ಅಂಬರೀಶ್ ಪರ ದರ್ಶನ್ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ. ಇನ್ನು, ದರ್ಶನ್ ಪ್ರಚಾರಕ್ಕೆ ಇಳಿದ್ಮೇಲೆ ಕೇಳ್ಬೇಕಾ ಅವ್ರ ಅಭಿಮಾನಿಗಳು ಬಂದೇ ಬರ್ತಾರೆ. ಹೀಗೆ ಜನಸಾಗರದ ಮಧ್ಯೆ ಕೆ.ಆರ್.ನಗರದ ಕಾಳಮ್ಮನ ಕೊಪ್ಪಲಿನಲ್ಲಿ ದರ್ಶನ್​​ ಪ್ರಚಾರ ಕೈಗೊಂಡಿದ್ರು. ಆಗ ಜನರ ಮಧ್ಯೆ ಒಂದು ಬಸವ ನಿಂತಿತ್ತು. ದರ್ಶನ್ ತೆರೆದ ವಾಹನದ ಮೇಲೆ ಸುಮಲತಾ ಪರ ಪ್ರಚಾರ ಮಾಡ್ತಿರೋದನ್ನ ನೋಡಿದ ಬಸವ, ರಸ್ತೆ ಮಧ್ಯೆ ಬಂದು ನಿಂತಿತ್ತು.

ದರ್ಶನ್ ಅಭಿಮಾನಿಗಳು ಕೇಳ್ಬೇಕಾ? ‘ನಮ್ ಸಾಹೇಬ್ರು ಪ್ರಚಾರಕ್ಕೆ ಬಂದಿದ್ದಾರೆ, ದಾರಿ ಬಿಡು ಬಸವಣ್ಣ ಅಂತಾ ಕೇಳಿಕೊಂಡಿದ್ದಾರೆ. ಆದ್ರೆ ಬಸವಣ್ಣ ಮಾತ್ರ ರಸ್ತೆ ಮೇಲಿಂದ ಒಂದು ಹೆಜ್ಜೆಯೂ ಕದಲಿಲ್ಲ. ಎಷ್ಟೇ ಪ್ರಯತ್ನ ಮಾಡಿದ್ರೂ ಬಸವ ಮಾತ್ರ ರಸ್ತೆ ಬಿಟ್ಟು ಹೊರಡಲೇ ಇಲ್ಲ. ಬಸವನನ್ನ ವಾಹನದ ಮೇಲೆ ನಿಂತು ನೋಡುತ್ತಲೇ ಇದ್ದ ದರ್ಶನ್, ನಿಲ್ಲಿ ನಿಲ್ಲಿ ನಾನು ಬರುತ್ತೇನೆ ಅಂತಾ ಹೇಳಿ ವಾಹನ ಮೇಲಿಂದ ಇಳಿದಿದ್ದಾರೆ. ಸಾವಿರಾರು ಜನರ ಮಧ್ಯೆ ದರ್ಶನ್ ನುಸುಳಿ ಬಸವಣ್ಣ ಇದ್ದಲ್ಲಿಗೆ ಹೋಗಿದ್ದಾರೆ.

ತಮ್ಮದೇ ಸ್ಟೈಲ್​ನಲ್ಲಿ ಬಸವಣ್ಣನನ್ನ ದರ್ಶನ್ ಮುಟ್ಟಿ ಮಾತನಾಡಿಸಿದ್ದಾರೆ. ಅಲ್ಲದೇ ಬಸವಣ್ಣನಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಯಾವಾಗ ದರ್ಶನ್ ಬಸವಣ್ಣನನ್ನ ಮುಟ್ಟಿ ಮಾತನಾಡಿಸಿದ್ರೋ ಅಲ್ಲಿಂದ ಬಸವ ಜಾಗ ಖಾಲಿ ಮಾಡಿದೆ. ಜನರ ಮಧ್ಯೆ ನಿಧಾನಕ್ಕೆ ನಡೆದು ಬೇರೆಡೆಗೆ ಹೋಗಿದೆ. ನಂತ್ರ ದರ್ಶನ್ ವಾಹನ ಮೇಲೇರಿ ತಮ್ಮ ಪ್ರಚಾರವನ್ನ ಮುಂದುವರಿಸಿದ್ರು.

ನಿಜಕ್ಕೂ ಇದು ಅಚ್ಚರಿ ಆದುವಂತಹ ವಿಷಯ. ರಸ್ತೆಯಿಂದ ಎಷ್ಟೇ ಓಡಿಸಲು ಪ್ರಯತ್ನಿಸಿದ್ರೂ ಕದಲದ ಬಸವಣ್ಣ ದರ್ಶನ್ ಬಂದು ಮಾತನಾಡಿಸಿದ ಮೇಲೆ ಅಲ್ಲಿಂದ ಹೊರಟು ಹೋಗಿದ್ದಾನೆ. ಇದನ್ನ ಕಣ್ಣಾರೆ ಕಂಡ ಮಂಡ್ಯದ ಜನ ಆಶ್ಚರ್ಯಚಕಿತಗೊಂಡಿದ್ದಾರೆ. ಅಲ್ಲದೇ ದರ್ಶನ್​ಗೆ ಪ್ರಾಣಿಗಳ ಮೇಲಿರೋ ಪ್ರೀತಿ, ಬಸವಣ್ಣಗೆ ದರ್ಶನ್ ಮೇಲಿರೋ ಪ್ರೀತಿ ಎಲ್ಲರನ್ನ ನಿಬ್ಬೆರಗಾಗಿಸಿದ್ದಂತೂ ಸತ್ಯ.

ಅಷ್ಟೇ ಅಲ್ಲ ಮೊನ್ನೆ ಕೆ.ಆರ್​.ನಗರ ತಾಲೂಕಿನ ಸುತ್ತಮುತ್ತ ದರ್ಶನ್​ ಸುಮಲತಾ ಪರ ಕ್ಯಾಂಪೇನ್​ ನಡೆಸ್ತಿದ್ರು. ಬಿಸಿಲನ್ನೂ ಲೆಕ್ಕಿಸದೆ ಹತ್ತಾರು ಹಳ್ಳಿಗಳಿಗೆ ಪ್ರಯಾಣ ಬೆಳೆಸಿದ್ದರು. ಇದರ ನಡುವೆ ಹಳ್ಳಿಯೊಂದರಲ್ಲಿ ದರ್ಶನ್​ ಬರ್ತಿದ್ದಂತೆ ಪಟಾಕಿ ಹಚ್ಚಿ ಸ್ವಾಗತ ಕೋರಲು ಗ್ರಾಮಸ್ಥರು ಸಿದ್ಧರಾಗಿದ್ರು. ಆದ್ರೆ ಪಟಾಕಿ ಹಚ್ಚುತಿರೋದನ್ನು ಕಂಡ ದರ್ಶನ್​, ಅಭಿಮಾನಿಗಳಲ್ಲಿ ಪಟಾಕಿ ಹೊಡೆಯದಂತೆ ಮನವಿ ಮಾಡಿದ್ರು. ‘ಪಟಾಕಿ ಹೊಡೆಯೋದ್ರಿಂದ ಪರಿಸರ ಮಾಲಿನ್ಯ. ನಿಮಗೂ ತೊಂದರೆ ಆಗುತ್ತೆ. ಪ್ರಾಣಿ-ಪಕ್ಷಿಗಳಿಗೂ ಹಾನಿ ಆಗುತ್ತೆ. ಆದ್ದರಿಂದ ದಯವಿಟ್ಟು ಪಟಾಕಿ ಹಚ್ಚಬೇಡಿ’ ಅಂತಾ ಮನವಿ ಮಾಡಿಕೊಂಡಿದ್ದನ್ನ ಈ ವೇಳೆ ನಾವು ಸ್ಮರಿಸಬಹುದು.

ಬಸವಣ್ಣನ ಮುಟ್ಟಿ ಮಾತನಾಡಿಸುತ್ತಿರುವ ಬಸವಣ್ಣ

ಬಸವ ಹೋದ ಮೇಲೆ ಗಾಡಿ ಹತ್ತುತ್ತಿರುವ ದರ್ಶನ್
ದಾರಿ ಬಿಟ್ಟು ಹೊರಗೆ ಬಂದು ನಿಂತ ಬಸವಣ್ಣ

ಪವಾಡನಾ..? ಮೂಕ ಬಸವನ ಆಟನಾ?

ಪವಾಡನಾ..? ಮೂಕ ಬಸವನ ಆಟನಾ? ದರ್ಶನ್​​ಗಾಗಿ ಬಸವಣ್ಣ ಮಾಡಿದ್ದೇನು..? #Challengingstar #Darshan #Basavanna #Rally

Posted by FirstNews Kannada on Thursday, April 11, 2019


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv