ಕೇಬಲ್​​​​ ಮೇಲೆ ಮಂಗಗಳ ಬ್ಯಾಲೆನ್ಸಿಂಗ್ ಡ್ಯಾನ್ಸ್, ಮೈ ರೋಮಾಂಚನಗೊಳಿಸೋ ವಿಡಿಯೋ​

ಈ ಕೋತಿಗಳೇ ಹಾಗೆ.. ಏನಾದ್ರೂ ಒಂದೆಲ್ಲಾ ಒಂದು ಕೀಟಲೆಗಳನ್ನ ಮಾಡುತ್ತಲೇ ಇರುತ್ತವೆ. ಆದ್ರೆ ಈಗ ನಾವು ಹೇಳ್ತಿರೋದು ಕೋತಿಗಳ ಕ್ವಾಟ್ಲೆ ಕಥೆ ಅಲ್ಲ. ತಮ್ಮ ಬದುಕಿಗಾಗಿ ನಡೆಸಿದ ಪಯಣದ ಕಥೆ. ಹೌದು, ಉತ್ತರ ಜಪಾನ್​​ನ ಮುಟ್ಸುವಿನಲ್ಲಿ ಒಂದಿಷ್ಟು ಮಂಗಗಳು ಇಂಟರ್​​ನೆಟ್​ನಲ್ಲಿ ಸಖತ್ ಫೇಮಸ್​ ಆಗಿವೆ. ಹಿಮದಿಂದ ತಮ್ಮನ್ನ ರಕ್ಷಣೆ ಮಾಡಿಕೊಳ್ಳಲು ಕೇಬಲ್​ ಸಹಾಯದಿಂದ ಬ್ಯಾಲೆನ್ಸ್​ ಮಾಡಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಮಂಗಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಆಹಾರ ಹುಡುಕುತ್ತಾ ಹೋಗಬೇಕಿತ್ತು. ಆದರೆ ಅಲ್ಲಿ ಯಾವುದೇ ಮರಗಿಡಗಳು ಇರಲಿಲ್ಲ. ನೆಲದ ಮೇಲೆ ನಡೆದುಕೊಂಡು ಹೋಗೋಣ ಅಂದ್ರೆ ವಿಪರಿತ ಹಿಮ ಬಿದ್ದಿತ್ತು. ಅದ್ಕೆ ಅವು ಒಂದು ಪ್ಲಾನ್ ಮಾಡಿದ್ದವು. ತಾವಿರುವ ಸ್ಥಳದಲ್ಲಿ ಕೇಬಲ್ ಕಂಬಗಳ ಮೂಲಕ ವೈರ್​ಗಳು ಹಾದು ಹೋಗಿತ್ತು. ಮೇಲೊಂದು, ಕೆಳಗೊಂದು ಎರಡು ಕೇಬಲ್​ಗಳು ಹಾದು ಹೋಗಿದ್ದವು. ಇದನ್ನ ಗಮನಿಸಿದ ಮಂಗಗಳು ಕೇಬಲ್ ಕಂಬವೇರಿ ಕೇಬಲ್​ಗಳ ಸಹಾಯದಿಂದ ಬ್ಯಾಲೆನ್ಸ್​ ಮಾಡಿಕೊಂಡು ನಡೆದುಕೊಂಡು ಹೋಗಿವೆ. ಸಣ್ಣ ಕೇಬಲ್ ವೈರ್​ಗಳ ಮೇಲೆ ನಡೆದುಕೊಂಡು ಹೋಗೋದು ಅಷ್ಟು ಸುಲಭವಲ್ಲ. ಸುಮಾರು 70 ಸೆಂಕೆಂಡ್​ಗಳಿರುವ ವಿಡಿಯೋ ವೈರಲ್​ ಆಗಿದೆ. ಒಂದರ ಹಿಂದೆ ಒಂದು ಮಂಗಳು ಕಷ್ಟಪಟ್ಟು ನಡೆದುಕೊಂಡು ಹೋಗುವ ದೃಶ್ಯ ನೋಡುಗರ ಮೈ ರೋಮಾಂಚನಗೊಳಿಸದೇ ಇರದು.