ಫಸ್ಟ್​​ನ್ಯೂಸ್​ ಜೊತೆ ಲಂಡನ್​ನಿಂದ ಇಂಟರ್​ನ್ಯಾಶನಲ್ ವಿಲನ್ ಡ್ಯಾನಿ EXCLUSIVE ಮಾತು..!

ಇವರು ಇಂಟರ್​ನ್ಯಾಶನಲ್ ವಿಲನ್.. ಲುಕ್​​ನಲ್ಲೇ ಹಿರೋಗಳ ಎದೆಯನ್ನೂ ಝಲ್ ಎನ್ನಿಸುವಂಥ ನೋಟ.. ಗುಡುಗಿದರೆ 21 ತುಪಾಕಿ ಹಾರಿದಂಥ ಸೌಂಡ್.. ತಮಿಳು ಸಿಂಗಂ ಚಿತ್ರದಲ್ಲಿ ಸೂರ್ಯಗೂ ನೀರು ಕುಡಿಸಿದ್ದ ಖತರ್ನಾಕ್.. ಈಗ ಕನ್ನಡದ ತಾರಕಾಸುರ ಚಿತ್ರದಲ್ಲಿ ಭಯ ಹುಟ್ಟಿಸ್ತಿರೋ ಡ್ಯಾನಿ, ಕನ್ನಡ ಚಿತ್ರದಲ್ಲಿ ನಟಿಸಿದ ತಮ್ಮ ಅನುಭವವನ್ನು ಫಸ್ಟ್​ ನ್ಯೂಸ್​ ಜೊತೆ ಬಿಚ್ಚಿಟ್ಟಿದ್ದಾರೆ. ಲಂಡನ್​ನಿಂದ ಫಸ್ಟ್​ನ್ಯೂಸ್​ ಜೊತೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ ಡ್ಯಾನಿ, ತಾವು ಪರ್ಸನಲ್​ ಲೈಫ್​ನಲ್ಲಿ ಹೇಗಿದ್ದೇನೆ ಅನ್ನೋದನ್ನು ಪ್ರೇಕ್ಷಕರಿಗೆ ಹೇಳಿದ್ದಾರೆ.

ಫಸ್ಟ್​ನ್ಯೂಸ್​ಗೆ ಡ್ಯಾನಿ ಹೇಳಿದ್ದೇನು..?!

 ಚಂದ್ರಶೇಖರ್​ ಬಂಡಿಯಪ್ಪ ಮತ್ತು ಚಿತ್ರ ತಂಡದೊಂದಿಗೆ ಕೆಲಸ ಮಾಡಿದ್ದು ಒಂದು ಉತ್ತಮ ಅನುಭವವಾಗಿತ್ತು. ಕನ್ನಡ ಚಿತ್ರದಲ್ಲಿ ನಟಿಸಿದ್ದು ನನಗೆ ಸಂತೋಷವಾಗಿದೆ. ತಾರಕಾಸುರ ಚಿತ್ರ ಜನರ ಹೃದಯದಲ್ಲಿನ ಸಂಸ್ಕೃತಿ ಕುರಿತು ನೇರವಾಗಿ ಬಿಂಬಿಸುತ್ತದೆ. ಈ ಚಿತ್ರ ನನಗೆ ಒಂದು ಸ್ಪೆಷಲ್​ ಅನುಭವ. ಚಿತ್ರದಲ್ಲಿ ನಾನು ವಿಲನ್​ ಆಗಿ ಆ್ಯಕ್ಟ್​ ಮಾಡಿದ್ದೇನೆ.

ಚಿತ್ರದಲ್ಲಿ ನನ್ನ ಪಾತ್ರ, ಕ್ರೂರ, ನಂಬಿಕೆಗೆ ಅರ್ಹವಲ್ಲದ, ಗಟ್ಟಿ ನಿರ್ಧಾರ ಮತ್ತು ಕಲ್ಲು ಹೃದಯದ, ಜನರಲ್ಲಿ ನಡುಕ ಹುಟ್ಟಿಸುವ ವ್ಯಕ್ತಿಯಾಗಿ ನಟಿಸಿದ್ದೇನೆ. ಇದು ನನ್ನ ನಿಜ ಜೀವನದ ತದ್ವವಿರುದ್ಧವಾಗಿರುವ ಪಾತ್ರ. ನಿಜ ಜೀವನದಲ್ಲಿ ನಾನು ಕರುಣೆಯುಳ್ಳ ವ್ಯಕ್ತಿ ಹಾಗೂ ಸಹಾನುಭೂತಿಯುಳ್ಳವನು. ಹೀಗಾಗಿ ಚಿತ್ರದಲ್ಲೂ ಮುಂದೊಂದು ದಿನ ನಾನು ಒಳ್ಳೆಯ ವ್ಯಕ್ತಿಯಾಗಿ ನಟಿಸಲು ಇಚ್ಚಿಸುತ್ತೇನೆ. ಸದ್ಯ ನಾನು ವಿಲನ್ ಆಗಿ ನಟಿಸುವುದರಲ್ಲೇ ಸಂತೋಷವಾಗಿದ್ದೇನೆ.

ಇನ್ನು ಕನ್ನಡ, ತಮಿಳು ಮತ್ತು ಬಾಲಿವುಡ್​ ಚಿತ್ರಗಳಲ್ಲಿ ನಟಿಸುವುದು ಬೆಸ್ಟ್​ ಅನುಭವ ನೀಡಿದೆ. ಆದ್ರೆ ಈಗ ಚಿತ್ರದ ಡೈಲಾಗ್​ಗಳು ಸದ್ಯ ನನಗೆ ನೆನಪಾಗ್ತಿಲ್ಲ. ಆದ್ರೆ ಭಾರತಕ್ಕೆ ಬಂದಾಗ, ಕೆಲ ಸಂಭಾಷಣೆಗಳನ್ನ ಕಲಿತು ಡೈಲಾಗ್​ಗಳನ್ನ ಹೇಳಲು ಪ್ರಯತ್ನಿಸುತ್ತೇನೆ. ಚಿತ್ರದಲ್ಲಿ ನಟಿಸಿದ್ದು ನನಗೆ ತುಂಬಾ ಅನಂದವಾಯಿತು. ಹೀಗಾಗಿ ಚಿತ್ರ ತಂಡದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ.