ಕಣಿವೆ ರಾಜ್ಯದಲ್ಲಿ ಮೊದಲ ಮ್ಯೂಸಿಕಲ್​ ಡೇ ಸಂಭ್ರಮ..!

ಶ್ರೀನಗರ: ಬರೀ ಗುಂಡಿನ ಸದ್ದು, ಉಗ್ರರ ಉಪಟಳವೇ ಹೆಚ್ಚಾಗಿದ್ದ ಜಮ್ಮ-ಕಾಶ್ಮೀರದಲ್ಲಿ, ಇದೇ ಮೊದಲ ಬಾರಿಗೆ ನದಿ ದಡವೊಂದರಲ್ಲಿ ಸಂಗೀತ​ ಕಾರಂಜಿ ಹಾಗೂ ಲೇಸರ್​ ಶೋ ಆರಂಭವಾಗಿದೆ. ಶ್ರೀನಗರದ ದಾಲ್​ ಸರೋವರದ ದಡದಲ್ಲಿ ಈ ಕಲರ್​ಫುಲ್​ ಮ್ಯೂಸಿಕ್​ ಕಾರಂಜಿ ಪ್ರಾರಂಭಗೊಂಡಿದ್ದು, ಪ್ರವಾಸಿಗರು ಮತ್ತು ಸ್ಥಳೀಯರನ್ನ ಕೈ ಬೀಸಿ ಕರೆಯುತ್ತಿದೆ. ಸುಮಾರು ಆರು ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾದ ಈ ಲೇಸರ್​ ಮ್ಯೂಸಿಕ್​ ಕಾರಂಜಿಯನ್ನ, ಪ್ರಧಾನ ಮಂತ್ರಿ ಅಭಿವೃದ್ಧಿ ಯೋಜನೆಯಡಿ ವಿನ್ಯಾಸಗೊಳಿಸಲಾಗಿದೆ. ಪ್ರತಿನಿತ್ಯ ಸಾಯಂಕಾಲ ಆರು ಗಂಟೆಗೆ ಮನರಂಜನೆ ನೀಡಲು ಎರಡು ಶೋಗಳನ್ನ ಆಯೋಜಿಸಲಾಗಿದ್ದು, ಪ್ರತಿ ಶೋವನ್ನು ಸುಮಾರು 200 ಜನರು ನೋಡಲು ಅವಕಾಶ ಕಲ್ಪಿಸಲಾಗಿದೆ. ಮೊದಲ 15 ದಿನ ಉಚಿತ ಪ್ರವೇಶ ನೀಡಲಾಗುತ್ತಿದ್ದು, ನಂತರದ ದಿನಗಳಲ್ಲಿ ದರ ನಿಗದಿ ಮಾಡಲು ಸ್ಥಳೀಯ ಆಡಳಿತ ನಿರ್ಧರಿಸಿದೆ. ಕಾಶ್ಮೀರದ ಮುಕುಟದ ರತ್ನವೆಂದೇ ಖ್ಯಾತವಾಗಿರುವ ದಾಲ್ ಸರೋವರ ಹಗಲು ಹೊತ್ತು ಸಹಸ್ರಾರು ಪ್ರವಾಸಿಗರನ್ನ ಸೆಳೆದ್ರೆ, ಸಾಯಂಕಾಲ ಈ ಲೇಸರ್​ ಶೋ ಜನರನ್ನ ಸೆಳೆಯಲಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv