ಮಗಳು ಸರಿಯಾಗಿ ಹೋಮ್​ವರ್ಕ್ ಮಾಡಲಿ ಅಂತಾ ನಾಯಿಯನ್ನೆ ಕಾವಲಿಗಿಟ್ಟ ತಂದೆ..!

ಚೀನಾ: ಮನೆಯಲ್ಲಿ ಮಕ್ಕಳ ಕೈಯಲ್ಲಿ ಹೋಮ್​ವರ್ಕ್ ಮಾಡಿಸೋದು ಅಥವಾ ಓದಿಸೋದು ಅಂದ್ರೆ ದುಡಿಯುವ ತಂದೆ ತಾಯಿಗೆ ಸಾಕು ಸಾಕಾಗಿ ಹೋಗುತ್ತೆ. ಯಾಕೆಂದರೆ ಮಕ್ಕಳಿಗೆ ವಯೋ ಸಹಜವಾಗಿ ಬರುವ ಚಿತ್ತ ಚಾಂಚಲ್ಯತೆಯಿಂದ ಮಕ್ಕಳ ಮನಸ್ಸು ಬಹಳಷ್ಟು ಬೇಗ ಅತ್ತ -ಇತ್ತ  ವಾಲುತ್ತದೆ. ಈ ಹಿನ್ನೆಲೆಯಲ್ಲಿ ಚೀನಾದ ತಂದೆಯೋರ್ವ ಮಾಡಿದ ಐಡಿಯಾವೊಂದು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಅಷ್ಟಕ್ಕೂ ಆಗಿದ್ದು ಏನೆಂದ್ರೆ, ಚೀನಾದ ಗೂಜೋಯ್​ ಪ್ರದೇಶದ ನಿವಾಸಿ ಕ್ಷು ಲಿಯಾಂಗ್​ ಎಂಬ ವ್ಯಕ್ತಿ ತನ್ನ ಮಗಳು ಹೋಮ್​ವರ್ಕ್ ಮಾಡುವಾಗ, ಕಾವಲಿದ್ದು, ಹೋಮ್​​ವರ್ಕ್​ ಕಂಪ್ಲೀಟ್ ಮಾಡಿಸುವಂತೆ ನಾಯಿಯನ್ನು ಪಳಗಿಸಿದ್ದಾರೆ. ಫಂಟ್ಯೂವಾನ್​ ಎಂಬ ನಾಯಿ ತನ್ನ ಒಡತಿ ಕ್ಷಿನ್ಯಾ ಲಿಯಾಂಗ್ ಹೋಮ್​ವರ್ಕ್ ಮಾಡುವಾಗ, ಆಕೆಯ ಟೇಬಲ್​ ಮೇಲೆ ಮುಂಗಾಲುಗಳನ್ನ ಇಟ್ಟು​ ಕಾವಲಿದ್ದು ಹೋಮ್​​ವರ್ಕ್​ ಮಾಡಿಸುತ್ತದೆ.

ಈ ಕುರಿತು ಕ್ಷು ಲಿಯಾಂಗ್ ಮಾತನಾಡಿ, ನನ್ನ ನಾಯಿ ಚಿಕ್ಕದಾಗಿದ್ದಾಗ ಅದು ಬೆಕ್ಕಿನಿಂದ ಊಟವನ್ನ ಕಾಪಾಡಲು ಪಳಗಿಸಿದ್ದೆ. ಆನಂತರದ ದಿನಗಳಲ್ಲಿ ನನ್ನ ಮಗಳು ಹೋಮ್​ವರ್ಕ್ ಮಾಡುವಾಗ ತುಂಟಾಟ ಮಾಡುತ್ತಾ, ಟೈಂ ಪಾಸ್ ಮಾಡುತ್ತಿದ್ದಳು. ಹೀಗಾಗಿ ನಾನು ಸ್ವಲ್ಪ ಯೋಚನೆ ಮಾಡಿ, ನನ್ನ ಮಗಳು​ ಕ್ಷಿನ್ಯಾ ಹೋಮ್​ವರ್ಕ್ ಮಾಡುವಾಗ ಟೇಬಲ್​ ಮೇಲೆ ಮುಂಗಾಲುಗಳನ್ನ ಇಟ್ಟು​ ಕಾವಲಿರುವಂತೆ ಅದಕ್ಕೆ ಅಭ್ಯಾಸ ಮಾಡಿಸಿದೆ, ಈಗ ಅದು ಕಾವಲಿದ್ದು ಮಗಳ ಹೋಮ್​ವರ್ಕ್​ ಮಾಡಿಸುತ್ತದೆ ಅಂತಾ ಖುಷಿಯಾಗಿ ಹೇಳುತ್ತಾರೆ.

ಈ ಕುರಿತು ಬಾಲಕಿ ಕ್ಷಿನ್ಯಾ ಲಿಯಾಂಗ್ ಮಾತನಾಡಿ, ನಾನು ಹೋಮ್​ವರ್ಕ್ ಮಾಡುವಾಗ ನಮ್ಮ ನಾಯಿ  ಕಾಲವಲಿರುತ್ತದೆ. ನಾನು ಒಂಟಿಯಾಗಿ ಹೋಮ್​ವರ್ಕ್  ಮಾಡೋದಕ್ಕಿಂತ, ನನ್ನ ನಾಯಿ ಕಾವಲಿರುವಾಗ ಹೋಮ್​ವರ್ಕ್​ ಮಾಡೋದು ಬೋರಿಂಗ್​ ಅನಿಸಲ್ಲ. ನಾಯಿ ಕಾವಲಿರುವಾಗ ನನ್ನ ಸಹಪಾಠಿಯೊಬ್ಬರು ಜೊತೆಯಲ್ಲಿದ್ದಂತೆ ಅನಿಸುತ್ತದೆ ಅಂತಾ ನಗುತ್ತಾ ಹೇಳುತ್ತಾಳೆ.

  


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv