ಶೃಂಗಾರಗೊಂಡ ಡಾ.ರಾಜ್ ಸ್ಮಾರಕ.. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರ..!

ಬೆಂಗಳೂರು: ವರನಟ ಡಾ.ರಾಜ್ 90ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್​ ಸ್ಮಾರಕ ಹೂವುಗಳಿಂದ ಶೃಂಗಾರಗೊಂಡಿದೆ. ಇನ್ನೇನು ಕೆಲವೇ ಹೊತ್ತಿನಲ್ಲಿ ರಾಜ್ ಕುಟುಂಬದ ಸದಸ್ಯರು ಇಲ್ಲಿಗೆ ಬಂದು ಪೂಜೆ ಸಲ್ಲಿಸಲಿದ್ದಾರೆ. ಇನ್ನು, ಅಣ್ಣಾವ್ರ ಬರ್ತ್​ಡೇ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸ್ಮಾರಕಕ್ಕೆ ನೂರಾರು ಅಭಿಮಾನಿಗಳು ಬಂದು ಹೋಗುತ್ತಿದ್ದಾರೆ. ಒಂದು ಕಡೆ ಡಾ.ರಾಜ್ ಹುಟ್ಟಹಬ್ಬ ಆದ್ರೆ, ಮತ್ತೊಂದು ಕಡೆ ಅಂಬರೀಶ್ ಅವರ ಐದನೇ ತಿಂಗಳ ಪುಣ್ಯತಿಥಿ ನಡೆಯುತ್ತಿದೆ. ಹೀಗಾಗಿ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಡಾ. ರಾಜ್ ಸ್ಮಾರಕದತ್ತ ಸೇರುತ್ತಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv