ಮೈತ್ರಿ ಪಕ್ಷ ಅಭ್ಯರ್ಥಿಯಿಂದ ರೋಡ್ ಶೋ

ಹಾವೇರಿ: ಚುನಾವಣೆ ದಿನ ಹತ್ತಿರ ಬರುತ್ತಿದಂತೆ ಆಯಾ ಪಕ್ಷದ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.ಇವತ್ತು ಹಾವೇರಿ-ಗದಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾದ ಡಿ.ಆರ್ ಪಾಟೀಲ್ ಅವರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಚಿಕ್ಕೆರೂರ ಗ್ರಾಮದಲ್ಲಿ ರೋಡ್ ಶೋ ಮೂಲಕ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಲೋಕಸಭೆಯ ಅಭ್ಯರ್ಥಿಯಾದ ಡಿ ಆರ್ ಪಾಟೀಲ್, ಶಾಸಕ ಬಿ ಸಿ ಪಾಟೀಲ್, ಹಿಂಡಸಗೇರಿ ಕೋಳಿವಾಡ, ಜಿಲ್ಲಾಪಂಚಾಯತಿ ಅಧ್ಯಕ್ಷ ಕೆ ಕರಿಯಣ್ಣನವರ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಡಿ ಆರ್ ಪಾಟೀಲ್ ಬಿಜೆಪಿ ವಿರುದ್ಧ ಹರಿಹಾಯ್ದರು. ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಮೋದಿ ನಮ್ಮ ದೇಶಕ್ಕೆ ಕಪ್ಪು ಹಣ ತರುವುದಾಗಿ ಹೇಳಿದ್ರು ಆದು ಆಗಿಲ್ಲ. ಯಾವ ಒಬ್ಬ ವ್ಯಕ್ತಿಯ ಅಕೌಂಟ್ ಗೆ ೧೫ ಲಕ್ಷ ರೂಪಾಯಿ ಹಣ ಬಂದಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 72 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಹಾಗೂ ಇಂಜಿನಿಯರಿಂಗ್ ಕ್ಯಾಂಪಸ್ ಇಂಟರ್​ವ್ಯೂ ಮೂಲಕ ಉದ್ಯೋಗ ನೀಡಲಾಗಿತ್ತು. ಆದ್ರೆ ಬಿಜೆಪಿ ಸರ್ಕಾರ ಕೇವಲ ಮಾತಿನಲ್ಲಿ ಜನರನ್ನ ಸೆಳೆಯುತ್ತಿದೆ ಎಂದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv