ಡಿ.ಕೆ. ಶಿವಕುಮಾರ್ ಪ್ರಮಾಣ ಮಾಡಿದ ಅಜ್ಜಯ್ಯ ಯಾರು ಗೊತ್ತಾ..?

ತುಮಕೂರು: ಇಂದು ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ದರ್ಜೆಯ ಸಚಿವರಾಗಿ 25 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ರು. ಈ ಪೈಕಿ ಕೆಲವರು ದೇವರಲ್ಲಿ ಹೆಸರಲ್ಲಿ, ಇನ್ನು ಕೆಲವರು ತಂದೆ- ತಾಯಿ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರೆ. ಡಿ.ಕೆ.ಶಿವಕುಮಾರ್​ ಮಾತ್ರ ಅಜ್ಜಯ್ಯನ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ರು. ಆದರೆ ಆ ಅಜ್ಜಯ್ಯ ಯಾರು ಎಂಬುದೇ ಈಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಲಿಂಗೈಕ್ಯ ಶ್ರೀ ವೀರ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಎಂಬುದು ಅಜ್ಜಯ್ಯನವರ ಪೂರ್ಣ ಹೆಸರು. ಇವರು ಶಿವಕುಮಾರ್ ಅವರ ಕುಟುಂಬ ನಂಬಿಕೆಯ ಗುರು. ವೀರಗಂಗಾಧರ ಸ್ವಾಮೀಜಿಗಳನ್ನ ‘ಅಜ್ಜಯ್ಯ’ ಎಂತಲೂ ಭಕ್ತರು ಕರೆಯುತ್ತಾರೆ. ಶ್ರೀಗಳು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಕಾಡಸಿದ್ದೇಶ್ವರ ಮಠದ ಸಂಸ್ಥಾಪಕರು.ಇವರು ಎಷ್ಟು ಪವಾಡ ಪುರುಷರೆಂದರೆ ಜೀವಂತ ಹಾವನ್ನ ಮೈ ಮೇಲೆ ಹಾಕಿಕೊಂಡು ಶಿವ ಪೂಜೆ ಮಾಡುತ್ತಿದ್ದರಂತೆ. ಹೀಗಾಗಿಯೇ ಡಿ.ಕೆ. ಶಿವಕುಮಾರ್‌ರವರ ತಂದೆ ಈ ಮಠಕ್ಕೆ ಹೆಚ್ಚಾಗಿ ಹೋಗುತ್ತಿದ್ದರು. ಮಠದಲ್ಲಿ ಕಟ್ಟಿಕೊಂಡ ಹರಕೆಗಳು ಸಾಕಷ್ಟು ಈಡೇರಿವೆ. ಹಾಗಾಗಿಯೇ ಶಿವಕುಮಾರ್‌ ಅವರ ನಿವಾಸಕ್ಕೆ ಪ್ರವೇಶವಾಗುತ್ತಿದ್ದಂತೆ ಮೊದಲಿಗೆ ಕಾಣುವುದೇ ವೀರಗಂಗಾಧರ ಶಿವಾಚಾರ್ಯ ಸ್ವಾಮಿಗಳ ಫೋಟೋ.

ತಂದೆ ನಂಬಿದ್ದ ಕಾಡಸಿದ್ದೇಶ್ವರ ಮಠ, ಶಿವಕುಮಾರ್‌ಗೂ ಅಚ್ಚು ಮೆಚ್ಚು
ವೀರಗಂಗಾಧರ ಶಿವಾಚಾರ್ಯ ಸ್ವಾಮಿಗಳು ಶಿವೈಕ್ಯರಾದ ಬಳಿಕವೂ ಶಿವಕುಮಾರ್ ಕುಟುಂಬ, ಮಠಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಿದೆ. ಐಟಿ ದಾಳಿ ನಡೆದ ಸಂದರ್ಭದಲ್ಲೂ ಶಿವಕುಮಾರ್​ ಮಠದ ಈಗಿನ ಕರಿವೃಷಭ ದೇಶಿಕೇಂದ್ರ ಸ್ವಾಮಿಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಕಾಡಸಿದ್ದೇಶ್ವರ ಮಠದಲ್ಲಿ ನಡೆಯುವ ಯಾವುದೇ ಧಾರ್ಮಿಕ ಸಮಾರಂಭದಲ್ಲಿಯಾದ್ರು ಸರಿ, ಡಿ.ಕೆ. ಶಿವಕುಮಾರ್ ಹೆಸರು ಮುಂಚೂಣಿಯಲ್ಲಿರುತ್ತೆ. ಡಿಕೆಶಿ ಮಾತ್ರವಲ್ಲ ಮಹಾರಾಷ್ಟ್ರದ ಮಾಜಿ ಸಿಎಂ, ದಿವಂಗತ ವಿಲಾಸ್‌ರಾವ್ ದೇಶ್‌ಮುಖ್‌ ಅವರಿಗೂ ಈ ಮಠದ ಮೇಲೆ ನಂಬಿಕೆ. ಹಲವಾರು ಭಾರಿ ವಿಲಾಸ್‌ರಾವ್ ಈ ಮಠಕ್ಕೆ‌ ಭೇಟಿ‌ ನೀಡಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv