ಭಗವಂತ ರಮೇಶ್ ಜಾರಕಿಹೊಳಿ ಆಸೆ ಈಡೇರಿಸುವಂತೆ ಮಾಡಲಿ -ಶಿವಕುಮಾರ್​

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷ ಶಾಸಕ ಸ್ಥಾನ, ಸಚಿವ ಸ್ಥಾನ ಎಲ್ಲವನ್ನೂ ನೀಡಿದೆ. ಇದೀಗ ಅವರಿಗೆ ಉಸಿರು ಕಟ್ಟುವಂತೆ ಏನಾಗಿದೆಯೋ ಗೊತ್ತಿಲ್ಲ. ಆದ್ರೆ ಭಗವಂತ ಅವರ ಆಸೆ ಈಡೇರಿಸುವಂತೆ ಮಾಡಲಿ ಅಂತಾ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ನಾಯಕರಿದ್ದಾರೆ. ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅವರು ಸಿಕ್ಕಿದರೆ ಅಲ್ವಾ, ನಾನು ಮನವೊಲಿಸೋಕೆ ಸಾಧ್ಯ!? ಹಾಗೊಂದು ವೇಳೆ ಅವರು ಸಿಕ್ಕಿದರೆ ಅವರ ಜೊತೆ ಮಾತನಾಡುತ್ತೇನೆ ಅಂತಾ ಹೇಳಿದರು.

ಮುಂದೆ ಕಂಪ್ಲಿ ಗಣೇಶ್ -ಆನಂದ್ ಸಿಂಗ್ ಮಧ್ಯೆ ಗಟ್ಟಿ ಬಾಂಧವ್ಯ‌ ಮೂಡಿದರೆ ಸಾಕು..
ಇನ್ನು, ಹಲ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಎಸ್​, ಬಿಜೆಪಿಯವರು ತುಂಬಾ ದಡ್ಡರಿದ್ದಾರೆ. ಅವರ ಜೊತೆ 20 ಅಲ್ಲ, 28 ಶಾಸಕರು ಇದ್ದೇವೆ. ಅವರ ಜೊತೆ ಅಸೆಂಬ್ಲಿಯಲ್ಲಿ ಕೂರುತ್ತೇವೆ, ಮಾತನಾಡ್ತೇವೆ. ಆದ್ರೆ, ಸಂಸಾರ ಬೇರೆ, ರಾಜಕಾರಣವೇ ಬೇರೆ. ನಾವು ಜನರ ಮೇಲೆ ನಂಬಿಕೆ ಇಟ್ಟಿರುವವರು. ನಾವು ಗಂಟೆ, ಮುಹೂರ್ತ ಅಂತ ಇಡುವವರಲ್ಲ. ಬಿಜೆಪಿಯವರು ಖುಷಿಯಿಂದ ಮಾತನಾಡ್ತಿದ್ದಾರೆ, ಮಾತನಾಡಲಿ ಅಂತಾ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು. ಇದೇ ವೇಳೆ, ಕಂಪ್ಲಿ ಗಣೇಶ್ ತುಂಬಾ ನೋವು ಅನುಭವಿಸಿದ್ದಾರೆ. ಆನಂದ್ ಸಿಂಗ್ ಕೂಡ ನೋವು ಪಟ್ಟಿದ್ದಾರೆ. ಮುಂದೆ ಅವರಿಬ್ಬರ ನಡುವೆ ಗಟ್ಟಿ ಬಾಂಧವ್ಯ‌ ಮೂಡಿದರೆ ಸಾಕು ಅಂತಾ ಶಿವಕುಮಾರ್​ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv