‘ಮನಸ್ಸಿಗೆ ಎಷ್ಟೇ ನೋವಾದ್ರೂ ನಿರ್ಧಾರಗಳನ್ನ ಗೌರವಿಸಬೇಕಾಗುತ್ತೆ’

ಬೆಂಗಳೂರು: ಮನಸ್ಸಿಗೆ ಎಷ್ಟೇ ನೋವಾದ್ರೂ, ತೊಂದರೆಯಾದ್ರೂ ನಿರ್ಧಾರಗಳನ್ನ ಗೌರವಿಸಬೇಕಾಗುತ್ತೆ ಅಂತಾ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

ರಾಮನಗರ ವಿಧಾನಸಭಾ ಉಪಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ವಿಧಾನ ಸೌಧದಲ್ಲಿ ಮಾತನಾಡಿದ ಅವರು, ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧ ನಾವು ಹಲವಾರು ಬಾರಿ ಹೋರಾಟ ಮಾಡಿದ್ದೇವೆ. ಹೋರಾಟದಲ್ಲಿ ಕೆಲ ಬಾರಿ ಸೋತಿದ್ದೀವಿ, ಕೆಲ ಬಾರಿ ಗೆದ್ದಿದ್ದೀವಿ. ರಾಷ್ಟ್ರದ ಹಿತದೃಷ್ಟಿಯಿಂದಾಗಿ ನಾವು ತೆಗೆದುಕೊಂಡಿರುವ ಕೆಲ ನಿರ್ಧಾರಗಳನ್ನು ಮನಸ್ಸಿಗೆ ಎಷ್ಟೇ ನೋವಾದ್ರೂ, ತೊಂದರೆಯಾದ್ರೂ ಗೌರವಿಸಬೇಕಾಗುತ್ತೆ ಅಂತಾ ಅಭಿಪ್ರಾಯ ಪಟ್ಟಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಸಿಎಂ ಲಿಂಗಪ್ಪ ಪಕ್ಷದ ನಿಷ್ಠಾವಂತ ಮುಖಂಡರು. ಅವರ ಪುತ್ರ ತಂದೆಯ ಮಾತು ಕೇಳದೆ ಬಿಜೆಪಿಗೆ ಹೋಗಿದ್ದಾರೆ. ಈ ಬಗ್ಗೆ ಲಿಂಗಪ್ಪ ಅವ್ರಿಗೂ ನೋವಿದೆ ಅಂತಾ ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv