‘ಎಂ.ಬಿ ಪಾಟೀಲ್ ನನ್ನ ಗುರುಗಳು, ನಾನು ಯಾವುದಕ್ಕೂ ಮೂಗು ತೂರಿಸುತ್ತಿಲ್ಲ’: ಡಿಕೆಎಸ್​​

ಬೆಂಗಳೂರು: ಸ್ವತಂತ್ರ ಲಿಂಗಾಯತ ಧರ್ಮ ಕುರಿತು ಗೃಹ ಸಚಿವ ಎಂ.ಬಿ ಪಾಟೀಲ್​ ನೀಡಿರುವ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾನು ನನ್ನ ವೈಯಕ್ತಿಕ ಅಭಿಪ್ರಾಯವನ್ನ ಸ್ಪಷ್ಟವಾಗಿ ಹೇಳಿದ್ದೇನೆ. ಅನಿಸಿಕೆಯನ್ನ ವ್ಯಕ್ತಪಡಿಸಲು ನನಗೆ ನನ್ನದೇ ಆದ ಸ್ವಾತಂತ್ರ್ಯ ಇದೆ. ನಾನು ರಾಜ್ಯದ ಒಬ್ಬ ಪ್ರಜೆ. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ಇರಬಾರದು. ಇದು ನನ್ನ ಸ್ಪಷ್ಟ ನಿಲುವು ಅಂತಾ ಹೇಳಿದರು.

ಇದೇ ವೇಳೆ, ನಾನು ಯಾವುದಕ್ಕೂ ಮೂಗು ತೂರಿಸುತ್ತಿಲ್ಲ. ಎಂ.ಬಿ ಪಾಟೀಲ್ ಏನಾದ್ರು ಮಾತಾಡಲಿ. ಅವರು ನನ್ನ ಗುರುಗಳು, ನಾನು ಅವರ ಶಿಷ್ಯ.
ನನ್ನ ವೈಯಕ್ತಿಕ ಅಭಿಪ್ರಾಯಕ್ಕೆ ಟೀಕೆ ಟಿಪ್ಪಣಿ ಮಾಡಲಿ. ನನ್ನ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಇದನ್ನ ನಮ್ಮ ಪಕ್ಷ ತೀರ್ಮಾನ ಮಾಡುತ್ತೆ. ಹೈಕಮಾಂಡ್​ಗೆ ದೂರು ನೀಡಲಿ ನೋಡೋಣ. ಇದರಿಂದ ಶಿಕ್ಷೆಯಾದರೆ ಪ್ರಸಾದ ಅಂತ ಸ್ವೀಕರಿಸುತ್ತೇನೆ ಅಂತಾ ಡಿ.ಕೆ ಶಿವಕುಮಾರ್​ ಹೇಳಿದರು.

ನಿನ್ನೆ ವಿಜಯಪುರದಲ್ಲಿ ಮಾತನಾಡಿದ್ದ ಗೃಹ ಸಚಿವ ಎಂ.ಬಿ ಪಾಟೀಲ್, ರಾಜಕೀಯಕ್ಕೂ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೂ ಸಂಬಂಧವಿಲ್ಲ. ಮೊದಲಿನಿಂದ ಲಿಂಗಾಯತ ವಿಚಾರ ಪ್ರಣಾಳಿಕೆ ವಿಷಯವೂ ಆಗಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಧರ್ಮಕ್ಕೆ ಸಂಬಂಧವಿಲ್ಲ ಎಂದು ಹೇಳಿದ್ದರು. ಜೊತೆಗೆ, ಪಕ್ಷದ ಪರವಾಗಿ ಕ್ಷಮೆ ಕೇಳಲು ಡಿ.ಕೆ ಶಿವಕುಮಾರ್‌ ಯಾರು? ಡಿ.ಕೆ ಶಿವಕುಮಾರ್‌ಗೂ ಲಿಂಗಾಯತ ಧರ್ಮಕ್ಕೂ ಏನ್ ಸಂಬಂಧ? ಡಿಕೆ ಶಿವಕುಮಾರ್​ ಮೊದಲು ತಮ್ಮ ಮನೆ ತೊಳೆದುಕೊಳ್ಳಲಿ.  ಒಕ್ಕಲಿಗರ ಪ್ರಾಬಲ್ಯವಿರುವಲ್ಲಿ ಪಕ್ಷ ಬಲಪಡಿಸಲಿ. ಉತ್ತರ ಕರ್ನಾಟಕಕ್ಕೆ ಬಂದು ಓಡಾಡೋದು ಬಿಡಲಿ ಎಂದು ಎಂ.ಬಿ ಪಾಟೀಲ್ ಡಿ.ಕೆ ಶಿವಕುಮಾರ್​ ವಿರುದ್ಧ ಹರಿಹಾಯ್ದಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv