‘ಸಹೋದರ ಗೆದ್ದ ಸಂತಸವೂ ಇಲ್ಲ; ಈಗ ಎಲ್ಲವೂ ಯಡಿಯೂರಪ್ಪ ಕೈಯಲ್ಲಿದೆ’: ಡಿಕೆಎಸ್​

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ಗೆ ಕೇವಲ ಒಂದೇ ಸ್ಥಾನ ಬಂದಿದೆ. ಹೀಗಾಗಿ ನನಗೆ ಸೋದರ ಗೆದ್ದ ಸಂತಸವೂ ಇಲ್ಲ ಅಂತಾ ಸಚಿವ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ. ವಿದೇಶ ಪ್ರಯಾಣ ಮುಗಿಸಿಕೊಂಡು ನಿನ್ನೆ ರಾತ್ರಿ ಶಿವಕುಮಾರ್​ ನಗರಕ್ಕೆ ಆಗಮಿಸಿದ್ರು. ರಾಜಕೀಯ ಬೆಳವಣಿಗೆ, ಫಲಿತಾಂಶದ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಗೆ ಆಗಮಿಸಿದ್ರು. ಭೇಟಿಗೆ ಮೊದಲು ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆ ಫಲಿತಾಂಶದಿಂದ ದಿಗ್ಭ್ರಮೆಯಾಗಿದೆ. ಎಲ್ಲಿ ತಪ್ಪಾಗಿದೆ ಅಂತಲೇ ಗೊತ್ತಾಗುತ್ತಿಲ್ಲ. ರಾಜ್ಯದಲ್ಲಿ ಖರ್ಗೆ, ದೇವೇಗೌಡರಂಥವರೇ ಸೋತಿದ್ದು ಆತಂಕವಾಗಿದೆ. ಗೆಲುವು ಸಾಧಿಸಿರುವ ಒಬ್ಬ ಸುರೇಶ್ ಲೋಕಸಭೆಯಲ್ಲಿ ಏನು ಮಾಡಲು ಸಾಧ್ಯ ಅಂತಾ ಹೇಳಿದರು.

ಇದೇ ವೇಳೆ, ಕಾಂಗ್ರೆಸ್​-ಜೆಡಿಎಸ್ ನಡುವೆ ಮೈತ್ರಿ ಧರ್ಮ ಪಾಲನೆ ಆಗದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಬಾಯಿಗೆ ಬೀಗ ಹಾಕಿಕೊಳ್ಳಲು ಹೇಳಿದ್ದಾರೆ. ಹೀಗಾಗಿ ನಾನು ಯಾರ ವಿರುದ್ಧವೂ ಈಗ ಮಾತನಾಡಲ್ಲ. ಇದೀಗ ಎಲ್ಲವೂ ಬಿ.ಎಸ್ ಯಡಿಯೂರಪ್ಪ ಕೈಯಲ್ಲೇ ಇದೆ ಎಂದರು.

ನಿನ್ನೆ ಸಚಿವ ಸಂಪುಟದಲ್ಲಿ jsw ಕಂಪನಿಗೆ ಸಾವಿರಾರು ಎಕರೆ ಸರ್ಕಾರಿ ಭೂಮಿ ಕ್ರಯ ಮಾಡಿಕೊಟ್ಟ ವಿಚಾರವಾಗಿ ಶಿವಕುಮಾರ್ ಸರ್ಕಾರದ ನಿರ್ಣಯವನ್ನು ಸಮರ್ಥಿಸಿಕೊಂಡರು. ಸರ್ಕಾರದ ಭೂಮಿ ನೀಡುವ ನಿರ್ಣಯ ಸರಿ ಇದೆ. ಉದ್ಯೋಗ ಸೃಷ್ಟಿ, ಬಂಡವಾಳ ಹೂಡಿಕೆ, ಮೂಲಸೌಕರ್ಯ ವಿಚಾರದಲ್ಲಿ ಇಂತಹ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತೆ. ಈ ಹಿಂದೆ ಇನ್ಫೋಸಿಸ್​ಗೆ ಜಮೀನು ನೀಡಿದಾಗಲು ಆಕ್ಷೇಪ ಇತ್ತು. ಆದ್ರೆ ಆ ಸಂಸ್ಥೆಯಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗಿದೆ. ಹೀಗಾಗಿ ಒಮೊಮ್ಮೆ ಕೆಲ ನಿರ್ಣಯ ಕೈಗೊಳ್ಳಲೇ ಬೇಕಾಗುತ್ತೆ ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv