‘ನಿನ್ನೆಯ ಫಲಿತಾಂಶ ಕೇಂದ್ರಕ್ಕೆ ಮ್ಯಾನ್ ಡೇಟ್ ಮಾತ್ರ, ನಮ್ಮ ಮೈತ್ರಿ ಸೇಫ್​​’ ಡಿಸಿಎಂ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ನಾವು ಇನ್ನೂ 4 ವರ್ಷಗಳ ಕಾಲ ಸರ್ಕಾರವನ್ನು ಮುನ್ನಡೆಸುತ್ತೇವೆ ಅಂತಾ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ನಿನ್ನೆ ಹೊರಬಿದ್ದ ಲೋಕಸಭಾ ಫಲಿತಾಂಶದಲ್ಲಿ ಮೈತ್ರಿ ಪಕ್ಷಗಳು ನೆಲಕ್ಕಚ್ಚಿದ್ದವು. ಈ ಹಿನ್ನೆಲೆ ಇಂದು ಉಭಯ ಪಕ್ಷಗಳ ನಾಯಕರು, ಸಚಿವರು ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಅನೌಪಚಾರಿಕ ಸಭೆ ನಡೆಸಿದ್ರು. ಸಭೆ ಬಳಿಕ ಸಿಎಂ, ಡಿಸಿಎಂ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಡಿಸಿಎಂ ಪರಮೇಶ್ವರ್​, ಚುನಾವಣೆ ಇದ್ದಿದ್ದು ಕೇಂದ್ರಕ್ಕೆ ಹೊರತು ನಮ್ಮ ರಾಜ್ಯಕ್ಕೆ ಅಲ್ಲ. ನಿನ್ನೆಯ ಫಲಿತಾಂಶ ಕೇಂದ್ರಕ್ಕೆ ಮ್ಯಾನ್ ಡೇಟ್ ಆಗಿತ್ತೇ ಹೊರತು ರಾಜ್ಯ ಸರ್ಕಾರಕ್ಕಲ್ಲ. ಮೈತ್ರಿ ಸರ್ಕಾರಕ್ಕೆ ಯಾವುದೇ ಅಭದ್ರತೆ ಇಲ್ಲ. ಮೈತ್ರಿ ಸರ್ಕಾರ ಸೇಫಾಗಿದೆ. ಮೈತ್ರಿ ಸರ್ಕಾರ ಕೆಡವಲು ವಿಪಕ್ಷಗಳು ತಯಾರಿ ನಡೆಸಿದೆ, ಅದು ಸಾಧ್ಯವಿಲ್ಲ. ಸಿಎಂ ಜೊತೆ ನಾವು ನಿನ್ನೆಯೇ ಫಲಿತಾಂಶದ ಕುರಿತು ಚರ್ಚೆ ನಡೆಸಿದ್ದೇವೆ. ಇನ್ನು 4 ವರ್ಷ ಸಿಎಂಗೆ ನಮ್ಮ ಬೆಂಬಲ ಹೀಗೆ ಇರುತ್ತೆ ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv