ಕನ್ನಡ ಬಾವುಟದಲ್ಲೂ ‘ಡಿ ಬಾಸ್​’ ದರ್ಶನ್​..!

ಮಂಡ್ಯ ಲೋಕಸಭಾ ಚುನಾವಣಾ ಕಣ ಸಿನಿಮಾದಷ್ಟೇ ಇಂಟರೆಸ್ಟಿಂಗ್​ ಎನಿಸಿದೆ. ಅಬ್ಬರ ಪ್ರಚಾರ, ರೋಚಕ ತಿರುವು, ಮತದಾರರ ಮಾತು.. ಹೀಗೆ ಅಕ್ಷರಶಃ ಮಂಡ್ಯ ರಾಜಕಾರಣ ದೇಶದ ಗಮನ ಸೆಳೆದಿದೆ. ಮಂಡ್ಯ ಚುನಾವಣಾ ಕಣ ಇಷ್ಟೊಂದು ರಂಗಾಗಲು ಮತ್ತೊಂದು ಕಾರಣ ಸ್ಟಾರ್​ ಕ್ಯಾಂಪೇನ್. ‘ಜೋಡೆತ್ತು’ ಎನಿಸಿಕೊಂಡಿರೋ ದರ್ಶನ್​- ಯಶ್ ಆಗಮನ ಚುನಾವಣೆಯ ಮೇಲೆ ದೊಡ್ಡದೊಂದು ಪರಿಣಾಮ ಎಬ್ಬಿಸುವ ಸೂಚನೆಯಿದೆ. ಇಬ್ಬರ ಫ್ಯಾನ್ಸ್​ ಕೂಡ ವಿಭಿನ್ನವಾಗಿ ತಮ್ಮ ನೆಚ್ಚಿನ ನಟರನ್ನು ಆಹ್ವಾನಿಸುತ್ತಿದ್ದಾರೆ.

ಮಂಡ್ಯದಲ್ಲಿ ದಚ್ಚು-ರಾಕಿ ಹವಾ..!
ಸುಮಲತಾ ಅಂಬರೀಶ್​ ಪರವಾಗಿ ಇಬ್ಬರೂ ಸ್ಟಾರ್​ ನಟರೂ ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ. ಪ್ರತಿ ಹಳ್ಳಿಗಳಲ್ಲೂ ದಚ್ಚು-ರಾಕಿಗೆ ಭರ್ಜರಿ ಸ್ವಾಗತ ಸಿಗುತ್ತಿದೆ. ಇನ್ನು ‘ಚಾಲೆಂಜಿಂಗ್ ಸ್ಟಾರ್’ ಹವಾ ಮಂಡ್ಯದಲ್ಲಿ ತುಸು ಜೋರಾಗಿಯೇ. ಹೋದಲೆಲ್ಲಾ ದರ್ಶನ್​ ನೋಡೋಕೆ ನೂಕುನುಗ್ಗಲು ಸೃಷ್ಟಿಯಾಗ್ತಿದೆ. ದರ್ಶನ್​ ಸೌಜನ್ಯತೆ, ಅಭಿಮಾನಿಗಳ ಮೇಲಿಟ್ಟಿರೋ ಅಭಿಮಾನ.. ಎಲ್ಲವೂ ಮತ್ತಷ್ಟು ಪ್ರಬಲವಾಗಿದೆ. ಅಲ್ಲದೇ ಪ್ರತಿ ಹಳ್ಳಿಗಳಲ್ಲೂ ದಚ್ಚುರನ್ನು ಅಭಿಮಾನಿಗಳು ವಿಭಿನ್ನವಾಗಿ ಸ್ವಾಗತಿಸುತ್ತಿದ್ದಾರೆ. ಬೃಹತ್ ಗಾತ್ರದ ಹಾರ, ಜೆಸಿಬಿಯಲ್ಲಿ ಹೂವಿನ ಅಭಿಷೇಕ, ಎತ್ತಿನಗಾಡಿ ಪ್ರಚಾರ… ಹೀಗೆ ಹತ್ತಾರು ವಿಶೇಷತೆಗಳಿವೆ. ಅದ್ರಲ್ಲೂ ಕರ್ನಾಟಕ ಬಾವುಟದಲ್ಲಿ ಬರೆಸಿದ್ದ ‘ಡಿ ಬಾಸ್​’ ಹೆಸರು ಅಭಿಮಾನಿಗಳ ಗಮನ ಸೆಳೆದಿದೆ. ದರ್ಶನ್​ ಮೇಲಿನ ಮಂಡ್ಯದ ಜನತೆ ಅಭಿಮಾನವನ್ನು ಸಾರಿ ಹೇಳ್ತಿದೆ.