ತಿತ್ಲಿ ಚಂಡಮಾರುತಕ್ಕೆ ಆಂಧ್ರದಲ್ಲಿ 8 ಮಂದಿ ಸಾವು

ಒಡಿಶಾದಲ್ಲಿ ಅಬ್ಬರಿಸಿದ ನಂತರ ತಿತ್ಲಿ ಚಂಡಮಾರುತ ಆಂಧ್ರದೇಶಕ್ಕೂ ಅಪ್ಪಳಿಸಿದೆ. 165 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಶ್ರೀಕಾಕುಲಮ್​​​ ಜಿಲ್ಲೆಯಲ್ಲಿ ಅಪಾರ ಹಾನಿ ಸೃಷ್ಟಿಸಿದೆ. ಶ್ರೀಕಾಕುಲಮ್​ ಹಾಗೂ ವಿಜಯನಗರಂ ಜಿಲ್ಲೆಗಳಲ್ಲಿ ತಿತ್ಲಿ ಚಂಡಮಾರುತದಿಂದ 8 ಮಂದಿ ಸಾವನ್ನಪ್ಪಿದ್ದಾರೆ.

ಸುಮಾರು 6 ರಿಂದ 7 ಸಾವಿರ ವಿದ್ಯುತ್​ ಕಂಬಗಳು ಧರೆಗುರುಳಿರಬಹುದು ಎಂದು ಶ್ರೀಕಾಕುಲಂ ಜಿಲ್ಲಾಧಿಕಾರಿ ಕೆ. ಧನಂಜಯ ರೆಡ್ಡಿ ಹೇಳಿದ್ದಾರೆ. ಸುಮಾರು 4 ರಿಂದ 5 ಲಕ್ಷ ಜನರು ವಿದ್ಯುತ್​ ಇಲ್ಲದೆ ಕಾಲ ಕಳೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಒಡಿಶಾದಲ್ಲಿ ತಿತ್ಲಿ ಚಂಡಮಾರುತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ಸದ್ಯಕ್ಕೆ ವರದಿಯಾಗಿಲ್ಲ.

ಇನ್ನು ತಿತ್ಲಿ ಚಂಡಮಾರುತ ಕ್ರಮೇಣವಾಗಿ ದುರ್ಬಲಗುಳ್ಳಲಿದ್ದು, ಶುಕ್ರವಾರ ಬೆಳಗ್ಗೆ ಹೊತ್ತಿಗೆ ಇಳಿಮುಖವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.