ಸೈಕಲ್​ ರವಿ ಶೂಟೌಟ್ ಕೇಸ್‌​; ಆರೋಪಿಗೆ ಡ್ರಿಲ್ಲಿಂಗ್‌..!

ಬೆಂಗಳೂರು: ರೌಡಿ ಶೀಟರ್​ ಸೈಕಲ್​ ರವಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ನಟ ಸಾಧುಕೋಕಿಲ ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು, ಈಗ ಜೆಡಿಎಸ್​ನ ಪರಾಜಿತ ಅಭ್ಯರ್ಥಿ ಅಲ್ತಾಫ್​ ಖಾನ್​ರನ್ನು ವಿಚಾರಣೆ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿರೋ ಹಿನ್ನೆಲೆಯಲ್ಲಿ ಅಲ್ತಾಫ್‌ ಖಾನ್‌ರನ್ನು ವಿಚಾರಣೆಗೊಳಪಡಿಸಲಾಗಿದೆ. ಅಲ್ತಾಫ್​ಖಾನ್ ಅಕ್ರಮ ಹಣ ವರ್ಗಾವಣೆ ಮಾಡಲು ಸೈಕಲ್ ರವಿಯನ್ನ ಬಳಸಿಕೊಂಡಿರುವ ಆರೋಪದ ಮೇರೆಗೆ, ಪಿಟಿ ಸುಬ್ರಮಣ್ಯ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ ಪ್ರಕಾಶ್​ರಿಂದ ನಿನ್ನೆ ಸಂಜೆ ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಸೈಕಲ್ ರವಿ ಬಳಿ ಸುಮಾರು 250 ಕೋಟಿ ಆಸ್ತಿಪತ್ರಗಳ ಮೂಲದ ಬಗ್ಗೆಯೂ ನಂಟು ಹೊಂದಿರುವ ಅಲ್ತಾಫ್​ಗೆ ಸಿಸಿಬಿ ಪೊಲೀಸರು ಫುಲ್‌ಆಗೇ ಡ್ರಿಲ್‌ ಮಾಡಿದ್ದಾರೆ.