ಬೆಂಗಳೂರಲ್ಲಿ ಸೈಕಲ್ ಜಾಥಾ ಮೂಲಕ ಮತದಾನ ಜಾಗೃತಿ

ಬೆಂಗಳೂರು: ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ ಸೈಕಲ್ ಜಾಥಾ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಗರದ ಕಂಠೀರವ ಸ್ಟೇಡಿಯಂ ಆವರಣದಿಂದ ಪ್ರಾರಂಭವಾದ ಸೈಕಲ್ ಜಾಥಾ, ಸುಮಾರು 30 ಕಿ.ಮಿ ಸಂಚರಿಸಿತು. ಈ ವೇಳೆ ನೂರಾರು ಸೈಕಲ್ ಸವಾರರು ಮತದಾನ ಜಾಗೃತಿಯ ಫಲಕಗಳೊಂದಿಗೆ ಒಟ್ಟಾಗಿ ಸಂಚರಿಸಿದ್ದು, ಆಕರ್ಷಣೀಯವಾಗಿತ್ತು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv