ಟ್ರಾನ್ಸ್ ಫಾರ್ಮರ್ ದುರಸ್ಥಿ ವೇಳೆ ಕಾರ್ಮಿಕ ಸಾವು

ಬಾಗಲಕೋಟೆ: ಟ್ರಾನ್ಸ್ ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್‌ ಪ್ರವಹಿಸಿದ ಪರಿಣಾಮ ಹೆಸ್ಕಾಮ್‌ನ ಲೈನ್‌ಮೆನ್‌ ಸಾವನ್ನಪ್ಪಿರುವ ಘಟನೆ ಹುನಗುಂದ ಪಟ್ಟಣದ ಮಹಾಂತನಗರದಲ್ಲಿ ನಡೆದಿದೆ. ಶರಣಯ್ಯ ಹಾದಿಮನಿ (27) ಮೃತ ಕಾರ್ಮಿಕ. ಹೆಸ್ಕಾಮ್ ಅಧಿಕಾರಿಗಳು, ಲೈನ್​ಮನ್​ರ ಮಾತಿನ ಮೇರೆಗೆ ವಿದ್ಯುತ್​ ಕಡಿತಗೊಳಿಸಿದ್ದಾರೆಂದು ನಂಬಿ, ಟ್ರಾನ್ಸ್ ಫಾರ್ಮರ್ ದುರಸ್ಥಿಗಾಗಿ ವಿದ್ಯುತ್​ ಕಂಬ ಹತ್ತಿದ ಕಾರ್ಮಿಕ ತನ್ನ ಕೆಲಸ ರೆಪೇರಿ ಮಾಡುತ್ತಿದ್ದ. ಆದ್ರೆ ಈ ವೇಳೆ ದಿಢೀರ್‌ ವಿದ್ಯುತ್‌ ಪ್ರವಹಿಸಿದ ಪರಿಣಾಮ ಕಂಬದ ಮೇಲೆಯ ಶರಣ್ಯ ಅಸುನೀಗಿದ್ದಾನೆ. ಹೆಸ್ಕಾಮ್ ಅಧಿಕಾರಿಗಳು ಹಾಗೂ ಲೈನ್ ಮನ್ ನಿರ್ಲಕ್ಷ್ಯವೇ ಶರಣಯ್ಯನ ಸಾವಿಗೆ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.