ದೇಹದ ಫ್ಯಾಟ್​ ಕಡಿಮೆಯಾಗ ಬೇಕಾ? ಹಾಗಿದ್ರೆ ಮುಳ್ಳುಸೌತೆ ತಿನ್ನಿ..!

ಮನುಷ್ಯ ಐಷರಾಮಿ ಜೀವನಕ್ಕೆ ಒಗ್ಗಿ ಹೋಗಿದ್ದಾನೆ. ಯಂತ್ರೋಪಕರಣಗಳ ಮೇಲೆ ತುಂಬಾನೇ ಅವಲಂಬಿತನಾಗಿದ್ದಾನೆ. ಹೀಗಾಗಿ ಮೈ ಬಗ್ಗಿಸಿ ದುಡಿಯೋರ ಸಂಖ್ಯೆ ಅತಿ ವಿರಳ. ಒಂದೆಡೆ ಕೂತು ಹಣ ಸಂಪಾದನೆ ಮಾಡೋದೆೇ ಈಗಿನ ಕಾಲದ ಟ್ರೆಂಡ್​. ಆದ್ರೆ ದೇಹಕ್ಕೆ ಸರಿಯಾದ ವ್ಯಾಯಾಮ ಮತ್ತು ಚಲನವಲನ ಇಲ್ಲದಿದ್ರೆ ಇಂತಹ ಸಮಸ್ಯೆ ಎದುರಾಗುತ್ತೆ. ಬೊಜ್ಜು ಕರಗಿಸಬೇಕಾದ್ರೆ ಕಠಿಣ ವ್ಯಾಯಾಮ ಮತ್ತು ಸರಿಯಾದ ಆಹಾರ ಪಥ್ಯ, ಡಯೆಟ್​ ಪ್ಲಾನ್‌ನ ಪಾಲಿಸಬೇಕು. ಫ್ಯಾಟ್​ನ ಕರಗಿಸಬೇಕಾ..? ಹಾಗಾದರೆ ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಇದನ್ನು ಅಳವಡಿಸಲೇ ಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರಿನಾಂಶ ಒಳಗೊಂಡ ಮುಳ್ಳುಸೌತೆ ತಿನ್ಬೇಕು.

1. ಮುಳ್ಳುಸೌತೆ ಜ್ಯೂಸ್ ಕೊಲೆಸ್ಟ್ರಾಲ್​ ಪ್ರಮಾಣ ನಿಯಂತ್ರಿಸುತ್ತೆ

ಮುಳ್ಳುಸೌತೆ ಜ್ಯೂಸ್‌ನಲ್ಲಿರುವ ಪೌಷ್ಠಿಕಾಂಶಗಳಿಗೆ ಕೊಲೆಸ್ಟ್ರಾಲ್​ ಕಡಿಮೆ ಮಾಡೋ ಸಾಮರ್ಥ್ಯವಿದೆ. ಮಿತಿಮೀರಿದ್ರೆ ಯಾವುದೂ ಒಳ್ಳೆಯದಲ್ಲ ಎನ್ನುವ ಹಾಗೆ ರಕ್ತದಲ್ಲಿ ಗ್ಲೂಕೋಸ್​ನ ಪ್ರಮಾಣ ಹೆಚ್ಚಾದ್ರೂ ತೊಂದರೆಯೇ. ಆದ್ರಿಂದ ಮುಳ್ಳುಸೌತೆ ಜ್ಯೂಸ್ ಸೇವನೆ ಕೊಲೆಸ್ಟ್ರಾಲ್ ಮತ್ತು ಬ್ಲಡ್​ನ ಗ್ಲೂಕೊಸ್ ಪ್ರಮಾಣ ಬ್ಯಾಲೆನ್ಸ್​ ಮಾಡುತ್ತೆ. ಅತಿಯಾದ ಫ್ಯಾಟ್​​ನಿಂದ ಅಧಿಕ ಒತ್ತಡ, ಮಧುಮೇಹ, ಕ್ಯಾನ್ಸರ್​ ಮತ್ತು ಹೃದಯದ ರಕ್ತನಾಳದ ಕಾಯಿಲೆಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

2. ಊದಿಕೊಂಡಿರುವ ಹೊಟ್ಟೆ ಅನ್​ ಹೆಲ್ದಿ ಬೊಜ್ಜಿನ ಸಮಸ್ಯೆ ಸೂಚಿಸುತ್ತೆ

ಮುಳ್ಳುಸೌತೆಯಲ್ಲಿರುವ ಬೀಜಗಳು ದೇಹದಲ್ಲಿರುವ ಬೇಡದ ಸೂಕ್ಷ್ಮಾಣು ಜೀವಿ ಮತ್ತು ಅವಶ್ಯಕವಿಲ್ಲದ ನೀರನ್ನು ಹೊರಸೂಸುತ್ತೆ. ಅದಲ್ಲದೆ ಮಸಲ್ಸ್​ನ್ನು ಸದೃಢ ಪಡಿಸುತ್ತೆ.

3. ಹೊಟ್ಟೆಯಲ್ಲಾಗುವ ಕಿರಿಕಿರಿ ಕಡಿಮೆ ಮಾಡುತ್ತೆ

ಹೊಟ್ಟೆಯಲ್ಲಾಗುವ ಹುಣ್ಣುಗಳು ದಡೂತಿ ಹೊಟ್ಟೆಗೆ ಒಂದು ಕಾರಣ. ಮುಳ್ಳುಸೌತೆಯ ಜ್ಯೂಸ್​ಗೆ ಉರಿಯೂತದ ತೊಂದರೆಗಳನ್ನ ಶಮನ ಮಾಡುವ ಶಕ್ತಿಯಿದೆ. ಬಾಯಿಗೆ ರುಚಿ ನೀಡಿ ಹೊಟ್ಟೆ ತಂಪಾಗಿರಿಸುತ್ತೆ ಈ ಮುಳ್ಳು ಸೌತೆ ಜ್ಯೂಸ್​.

4. ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತೆ

ಮುದಿತನದಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆ ಅಂದ್ರೆ ಕಾನ್ಸುಟ್ಯುಪೇಷನ್​. ಜೀರ್ಣಕ್ರಿಯೆಯಲ್ಲಿ ತೊಂದರೆಯನ್ನು ಎದುರಿಸುತ್ತಿರುವವರಿಗೆ ಮುಳ್ಳುಸೌತೆಯ ಜ್ಯೂಸ್​ನ ಸೇವನೆ ಪಚನಕ್ರಿಯೆಯನ್ನು ಸಡಿಲಿಸುವಲ್ಲಿ ಸಹಾಯಕಾರಿಯಾಗಿದೆ.
ಫ್ಯಾಟ್​ನ್ನು ಕರಗಿಸಲು ಒತ್ತಮ ಉಪಾಯವೇ ಮುಳ್ಳುಸೌತೆ ಜ್ಯೂಸ್​. ಒಂದು ನಿಂಬೆಯ ರಸ, 2 ಚಮಚ ಆಲೋವೇರ ರಸ, ಒಂದು ಕಪ್​ ನೀರು, ಒಂದು ಚಮಚ ಶುಂಠಿ ಪೇಸ್ಟ್​ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಅರಿದ ಮುಳ್ಳುಸೌತೆಗೆ ಹಾಕಿ ಚೆನ್ನಾಗಿ ಗ್ರೈಂಡ್​ ಮಾಡಿದರೆ ಮುಳ್ಳುಸೌತೆ ಜ್ಯೂಸ್​ ರೆಡಿಯಾಗುತ್ತೆ. ಮನೆಯಲ್ಲೇ ತಯಾರಿಸಬಹುದಾದ ಉತ್ತಮ ಗುಣಮಟ್ಟದ ಪರಿಹಾರೋಪಾಯವೇ ಮುಳ್ಳುಸೌತೆಯ ಜ್ಯೂಸ್​.

ವಿಶೇಷ ಬರಹ-ಪ್ರಫುಲ್ಲ ಕೋಟ್ಯಾನ್​