ಅಧಿಕಾರಕ್ಕಾಗಿ ಹಸಿದವರು ಜೆಡಿಎಸ್, ಹಳಸಿದವರು ಕಾಂಗ್ರೆಸ್ಸಿಗರು: ಸಿ.ಟಿ ರವಿ

ಮಂಗಳೂರು: ಕಾಂಗ್ರೆಸ್​ ಮತ್ತು ಜೆಡಿಎಸ್​ ಸಮ್ಮಿಶ್ರ ಸರ್ಕಾರ ಹಸಿದವರು ಮತ್ತು ಹಳಸಿದವರ ಸರ್ಕಾರ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಅಧಿಕಾರಕ್ಕಾಗಿ ಹಸಿದವರು ಜೆಡಿಎಸ್, ಹಳಸಿದವರು ಕಾಂಗ್ರೆಸ್ಸಿಗರು ಎಂದು ವ್ಯಂಗ್ಯವಾಡಿದ್ದಾರೆ. ಜನಾದೇಶ ಕಳೆದುಕೊಂಡವರು, ಜನಾದೇಶ ಗಳಿಸದವರ ಜೊತೆ ಸೇರಿದ್ದಾರೆ. ಅಧಿಕಾರಕ್ಕಾಗಿ ಸಾಂದರ್ಭಿಕ ಶಿಶು ಹುಟ್ಟಿಸಿಕೊಂಡಿದ್ದಾರೆ. ಈ ಜನ ವಿರೋಧಿ ಸರಕಾರಕ್ಕೆ ಹೆಚ್ಚು ದಿನ ಬಾಳಿಕೆ ಇರೋಲ್ಲ. 2019ರಲ್ಲಿ ಮೋದಿ ಸರಕಾರ ಮತ್ತೆ ಬರದಂತೆ ಷಡ್ಯಂತ್ರ ನಡೆದಿದೆ. ಅಂತಾರಾಷ್ಟ್ರೀಯ ಷಡ್ಯಂತ್ರದ ಭಾಗವಾಗಿ ಮೋದಿ ವಿರೋಧಿಗಳು ಒಂದಾಗಿದ್ದಾರೆ. ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಭಾರತ ಬಲಿಷ್ಠವಾಗುತ್ತೆ. ದೇಶದ ಪ್ರಗತಿಯನ್ನು ತಡೆಯುವುದಕ್ಕಾಗಿ ಈ ಎಲ್ಲ ಶಕ್ತಿಗಳು ಒಂದಾಗುತ್ತಿದ್ದಾರೆ. ದೇಶದ ಜನತೆ ಈ ಷಡ್ಯಂತ್ರದ ಮರ್ಮ ತಿಳಿದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ರು.

ಗುಂಡು, ತುಂಡಿನ ಪಾರ್ಟಿ ಸಂಸ್ಕೃತಿ ಪರಿಷತ್ ಚುನಾವಣೆಗೂ ನುಸುಳಿದೆ
ಗುಂಡು, ತುಂಡಿನ ಪಾರ್ಟಿ ಸಂಸ್ಕೃತಿ ವಿಧಾನ ಪರಿಷತ್ ಚುನಾವಣೆಗೂ ನುಸುಳಿದೆ. ಕೈ ಬಾಯಿ ಕೆಡಿಸಿಕೊಂಡವರು ಅಭ್ಯರ್ಥಿಗಳಾಗಿದ್ದಾರೆ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ. ಶಿವಮೊಗ್ಗದಲ್ಲಿ ಶಿಕ್ಷಕರಿಗೆ ಪಾರ್ಟಿ ನೀಡಿದ್ದಾಗ ದಾಳಿ ನಡೆದಿತ್ತು. ದಾಳಿ ಸಂದರ್ಭದಲ್ಲಿ ಅಭ್ಯರ್ಥಿ ಸೇರಿ ಮುಖಂಡರು ಓಡಿ ಪರಾರಿಯಾಗಿದ್ದರು. ಈ ಬಗ್ಗೆ ವಿಧಾನ ಪರಿಷತ್ತಿನ ಜಾಗೃತ ಮತದಾರರು ಜವಾಬ್ದಾರಿಯಿಂದ ಮತ ಚಲಾಯಿಸಬೇಕು ಎಂದು ಸಿ.ಟಿ ರವಿ ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv