ರಾಷ್ಟ್ರಮಟ್ಟದಲ್ಲೂ ಉಕ್ಕಿ ಹರಿಯುತ್ತಿದೆ ಕಣ್ಣೀರಿನ ರಾಜಕೀಯ..!

ದೆಹಲಿ: ಇತ್ತೀಚೆಗೆ ರಾಜ್ಯದಲ್ಲಿ ಕಣ್ಣೀರು ಹಾಗೂ ರಾಜಕೀಯ ತುಂಬಾನೇ ಚರ್ಚಿತವಾದ ವಿಷಯವಾಗಿತ್ತು. ವಿಶೇಷ ಅಂದರೇ ಇದೀಗ ರಾಷ್ಟ್ರಮಟ್ಟದಲ್ಲೂ ರಾಜಕಾರಣಿಗಳು ಕಣ್ಣೀರು ಇಡುತ್ತಿರುವ ಪ್ರಸಂಗಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಮುರಾದಬಾದ್​ನಲ್ಲಿ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಶಾಯರ್​ ಇಮ್ರಾನ್​ ಪ್ರತಾಪ್​​ಗಡಿಯಲ್ಲಿ ಮಾತನಾಡುತ್ತಾ ಗಳಗಳನೆ ಅತ್ತಿದ್ದಾರೆ. ಆದರೆ ಕಣ್ಣೀರಿಗೆ ಕಾರಣ ಮಾತ್ರ ಸ್ಪಷ್ಟವಾಗಿಲ್ಲ.

ಇನ್ನು ಇದಕ್ಕೂ ಕೆಲ ದಿನಗಳ ಹಿಂದೆ ಱಲಿಯೊಂದರಲ್ಲಿ ಬಿಜೆಪಿ ಅಭ್ಯರ್ಥಿ ಜಯಪ್ರದಾ ಕಣ್ಣೀರು ಹಾಕಿದ್ರು. ಇದಕ್ಕೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಆಜಂ ಖಾನ್​ ನೀಡಿದ್ದ ಅಶ್ಲೀಲ ಹೇಳಿಕೆ ಕಾರಣವಾಗಿತ್ತು. ತಮ್ಮ ವಿರುದ್ಧ ಆಜಂಖಾನ್​ ನೀಡಿದ್ದ ಹೇಳಿಕೆಯನ್ನ ನೆನೆದು ಜಯಪ್ರದಾ ಕಣ್ಣೀರಿಟ್ಟಿದ್ರು.

ಇದಾದ ಬಳಿಕ ಆಜಂ ಖಾನ್​ ಕೂಡ ರಾಮ್​ಪುರದಲ್ಲಿ ಕಣ್ಣೀರು ಹಾಕಿದ್ರು. ತಮ್ಮನ್ನು ಭಯೋತ್ಪಾದಕರಂತೆ ನೋಡಲಾಗುತ್ತಿದೆ. ನನ್ನ ವಿರುದ್ಧ ಕೇಸ್​ಗಳನ್ನ ಹಾಕಲಾಗುತ್ತಿದೆ. ಚುನಾವಣೆಗೆ ನಾನು ನಿಲ್ಲುವುದಿಲ್ಲ, ನನ್ನನ್ನು ಗುಂಡಿಕ್ಕಿ ಕೊಂದು ಬಿಡಿ ಅಂತೆಲ್ಲಾ ಹೇಳುತ್ತಾ ಅತ್ತಿದ್ದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv