ಮೊಬೈಲ್​​ನಲ್ಲಿ ವೈದ್ಯರ ಸಲಹೆ ಕೇಳುತ್ತಾ ಚುನಾವಣಾಧಿಕಾರಿ ಜೀವ ಉಳಿಸಿದ ​​ಸಿಆರ್​​ಪಿಎಫ್ ಯೋಧ!

ಕಾಶ್ಮೀರ: ಮೊನ್ನೆ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಶಾಂತ ರೀತಿಯಲ್ಲಿ ಮುಕ್ತಾಯವಾಗಿದೆ. ಆದ್ರೆ ಆ ಸಂದರ್ಭದಲ್ಲಿ ಪ್ರಿಸೈಡಿಂಗ್​ ಆಫೀಸರ್​ ಅಹಸಾನ್​ ಉಲ್​ ಹಖ್​ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ರಾತ್ರಿ 9 ಗಂಟೆ ವೇಳೆಯಲ್ಲಿ ಹೃದಯಾಘಾತವೂ ಆಗಿದೆ. ಆಗ ಚುನಾವಣಾ ಭದ್ರತೆಯ ಜವಾಬ್ದಾರಿ ಹೊತ್ತಿದ್ದ ​​ಸಿಆರ್​​ಪಿಎಫ್ ಯೋಧರ ಪೈಕಿ ಒಬ್ಬರು ಚುನಾವಣಾಧಿಕಾರಿಯ ಜೀವ ಉಳಿಸುವ ಜವಾಬ್ದಾರಿಯನ್ನೂ ಯಶಸ್ವಿಯಾಗಿ ಪೂರೈಸಿದ್ದಾರೆ.

 ಅ್ಯಂಬುಲೆನ್ಸ್​​ ಬರುವವರೆಗೂ 50 ನಿಮಿಷಗಳ ಹೋರಾಟ ಅದು ..
ಯೋಧ ಸುರೀಂದರ್​ ಕುಮಾರ್​​ ಎಂಬುವವರು ತಕ್ಷಣ ಸಿಆರ್​​ಪಿಎಫ್ ಘಟಕದ ವೈದ್ಯ ಸುನೀಮ್​ಗೆ ಫೋನ್​ ಹಚ್ಚಿ, ಚುನಾವಣಾಧಿಕಾರಿಗೆ ಹೃದಯಾಘಾತವಾಗಿದೆ. ತಕ್ಷಣ ಏನು ಮಾಡ್ಲಿ, ಹೇಳಿ ಎಂದು ಹೇಳಿದ್ದಾರೆ. ವೈದ್ಯ ಸುನೀಮ್ ಅವರೂ ಒಂದೇ ಉಸಿರಿನಲ್ಲಿ.. ಹೃದಯ ಮತ್ತು ಶ್ವಾಸಕೋಶ ಪ್ರಚೋದಕ ಮೆಥಡ್​​​ ಮೂಲಕ ಅವರನ್ನು ಸುಸ್ಥಿತಿಯಲ್ಲಿಡಲು ಸೂಚಿಸಿದ್ದಾರೆ. ಅ್ಯಂಬುಲೆನ್ಸ್​​ ಬರುವವರೆಗೂ CardioPulmonary Resuscitation (CPR) ಮೂಲಕ 50 ನಿಮಿಷಗಳ ಹೋರಾಟ ನಡೆಸಿದ್ದಾರೆ. ಯೋಧ ಸುರೀಂದರ್​ ಕುಮಾರ್​​ ಅವರ ಸ್ಥಿತಪ್ರಜ್ಞೆ ಮತ್ತು ಸಮಯಪ್ರಜ್ಞೆಯಿಂದಾಗಿ ಚುನಾವಣಾಧಿಕಾರಿ ಅಹಸಾನ್​ ಉಲ್ ಅವರ ಜೀವ ಉಳಿದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.