ಪ್ರಾಣ ತೆಗೆಯಲು ಬಂದ ಮಹಿಳಾ ನಕ್ಸಲ್​ಗೆ ರಕ್ತ ನೀಡಿ ಜೀವ ಉಳಿಸಿದ ಯೋಧರು..!

ಜಾರ್ಖಂಡ್​​: ಮೂವರು ಸಿಆರ್​ಪಿಎಫ್​ ಯೋಧರು ನಕ್ಸಲ್​​ ಮಹಿಳೆಗೆ ರಕ್ತ ನೀಡಿ ಜೀವ ಉಳಿಸುವ ಮೂಲಕ ತಮ್ಮ ಹೃದಯ ವೈಶಾಲ್ಯತೆಯನ್ನ ಮೆರೆದಿದ್ದಾರೆ. ಸಿಂಗ್​​​​​ಭುಮ್​​​ ಜಿಲ್ಲೆಯಲ್ಲಿ ಫೆಬ್ರವರಿ 14 ರಂದು ನಕ್ಸಲರ ವಿರುದ್ಧ ಎನ್​ಕೌಂಟರ್​ ನಡೆದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ನಕ್ಸಲ್​ ಮಹಿಳೆ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ ಯೋಧರು.

ಈ ಬಗ್ಗೆ ಮಾಹಿತಿ ನೀಡಿರುವ ಸುಪರಿಟೆಂಡೆಂಟ್​​ ಆಫ್​ ಪೊಲೀಸ್​​ ಚಂದನ್​ ಕುಮಾರ್, ಮುಫಸೈಲ್​ ಮತ್ತು  ಗೊಯಿಕೇರಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ 25 ಮಾವೋವಾದಿಗಳು ಕ್ಯಾಂಪ್​ ಹಾಕಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ 174 ಮತ್ತು 60 ಬೆಟಾಲಿಯನ್​ನ ಸಿಆರ್​ಪಿಎಫ್​ ಯೋಧರು ಹಾಗೂ ಜಿಲ್ಲಾ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು.

ಎನ್​ಕೌಂಟರ್​ ವೇಳೆ ನಕ್ಸಲರಿಗೆ ಶರಣಾಗುವಂತೆ ಮನವಿ ಮಾಡಲಾಯಿತು. ಆದರೆ ನಕ್ಸಲರು ಈ ವೇಳೆ ಕೆಲವು ಸ್ಫೋಟಕ ವಸ್ತುಗಳನ್ನ ಸ್ಫೋಟಿಸಿದರು. ಜೊತೆಗೆ ಸೇನೆ ವಿರುದ್ಧ ಗುಂಡುಗಳನ್ನ ಹಾರಿಸಿದ್ದರು. ಆಗ ನಕ್ಸಲರ ದಾಳಿಗೆ ಸೇನಾಧಿಕಾರಿಗಳು ಪ್ರತಿರೋಧವೊಡ್ಡಿ, ಮಾವೋವಾದಿಗಳ ವಿರುದ್ಧ ಗುಂಡು ಹಾರಿಸಿದರು. ಈ ವೇಳೆ ಮಹಿಳಾ ನಕ್ಸಲ್​ ಒಬ್ಬರು ಯೋಧರತ್ತ ಗನ್ ಹಿಡಿದು ಗುಂಡು ಹಾರಿಸಲು ಪ್ರಯತ್ನಿಸುತ್ತಿದ್ದಳು. ಇದನ್ನ ಗಮನಿಸಿದ ಸೇನಾಧಿಕಾರಿಗಳು ಆಕೆಯ ಎಡಗಾಲಿಗೆ ಗುಂಡು ಹಾರಿಸುತ್ತಾರೆ. ಪರಿಣಾಮ ಸ್ಥಳದಲ್ಲಿಯೇ ಆಕೆ ಕುಸಿದು ಬೀಳುತ್ತಾಳೆ.

ಕೂಡಲೇ ಆಕೆಯನ್ನ ಸೋನುವಾ ಪ್ರೈಮರಿ ಹೆಲ್ತ್​​ ಸೆಂಟರ್​​ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ಆಕೆಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರೋದ್ರಿಂದ ಛೈಬ್ಸಾದ ಸರ್ದಾರ್​​ ಹಾಸ್ಪಿಟಲ್​​ಗೆ ದಾಖಲು ಮಾಡಲಾಯ್ತು. ಅಲ್ಲಿಯೂ ಆಕೆ ಬದುಕೊಳಿಯೋದು ಕಷ್ಟು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಎಂಜಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ​​ಈ ವೇಳೆ ಅಲ್ಲಿನ ವೈದ್ಯರು ಆಕೆಗೆ ರಕ್ತದ ಅಗತ್ಯ ಇದೆ ಕೂಡಲೇ ಬೇಕು ಎಂದಿದ್ದಾರೆ. ಆಗ ಆಕೆಯ ಜೊತೆಗೆ ಬಂದಿದ್ದ ಯೋಧರಾದ​ ಬಿಚೈತ್ರಾ ಕುಮಾರ್, ಬೀರ್​ ಬಹಾದ್ದೂರ್ ಯಾದವ್, ಎಎಸ್​ಐ ಪಂಕಜ್ ಶರ್ಮಾ ರಕ್ತವನ್ನ ನೀಡಿ ಆಕೆಯ ಪ್ರಾಣ ಉಳಿಸಿದ್ದಾರೆ. ಕಾರ್ಯಾಚರಣೆ ವೇಳೆ ನಕ್ಸಲರ್​ ಕ್ಯಾಂಪ್​ ಅನ್ನ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಅಲ್ಲದೇ ವ್ಯಾಪಕ ಸ್ಫೋಟಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ನಕ್ಸಲರು ಯೋಧರ ಗುಂಡಿನ ದಾಳಿಗೆ ಹೆದರಿ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ವಿಷಕಾರಿ ಹಾವಿಗೂ ಹಾಲೆರೆಯುವ ದೊಡ್ಡಗುಣವನ್ನು ನಮ್ಮ ಯೋಧರು ಮತ್ತೊಮ್ಮೆ ಜಾಹಿರುಗೊಳಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv