ಬ್ಯಾನ್..ಬ್ಯಾನ್​..ಸೈನಿಕರು ಇನ್ನುಮುಂದೆ ಪಬ್​ಜಿ ಆಡುವಂತಿಲ್ಲ..!

ನವದೆಹಲಿ: ಸದ್ಯ ಎಲ್ಲಡೆ ಸುದ್ದಿಯಲ್ಲಿರುವ ಹೆಸರಾಂತ ಪಬ್‍ಜಿ ಗೇಮ್​ ಯುವಜನತೆಯ ನಿದ್ದೆಗೆಡಿಸಿದೆ. ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರು ಕೂಡಾ ಮೊಬೈಲ್​ ಹಿಡಿದು ಪಬ್​ಜಿ ಆಡುತ್ತಾ ಕುಳಿತುಬಿಡ್ತಾರೆ. ಈ ಪಬ್​​ಜಿಯಿಂದ ಅದೆಷ್ಟೋ ಅವಾಂತರಗಳು ನಡೆದುಹೋಗಿವೆ, ಇನ್ನೂ ನಡೆಯುತ್ತಿವೆ.  ಯುದ್ಧಭೂಮಿ ಫೀಲ್​ ಕೊಡುವ ಪಬ್​ಜಿ ಒಂದು ರೀತಿಯ ಅಡಿಕ್ಷನ್​ ಗೇಮ್​.. ಒಮ್ಮೆ ಮೊಬೈಲ್​ ಹಿಡಿದು ಕೂತ್ರೆ ಗೇಮ್​ ನಿಂದ ಹೊರಬರೋಕೆ ಸಾಧ್ಯವೇ ಇಲ್ಲಾ. ಇನ್ನು ಬ್ಲೂ ವೇಲ್​ ನಂತರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಗೇಮ್​ ಪಬ್​ಜಿ. ಅಂತ ಪಬ್​ಜಿಯಿಂದ ಭಾರತೀಯ ಸೇನೆ ಕೂಡ ಬೇಸತ್ತು ಹೋಗಿದೆ.

ಅಷ್ಟಕ್ಕೂ ಆಗಿದ್ದು ಏನಂದ್ರೆ, ಗನ್​ ಹಿಡ್ಕೊಂಡು ಗಡಿಭಾಗಯಲ್ಲಿ ಶತ್ರುಗಳನ್ನ ಹೊಡೆದುರುಳಿಸಿ ನಮ್ಮನ್ನ ರಕ್ಷಿಸೋ ಸಿಆರ್​ಪಿಎಫ್​ ಯೋಧರು ಕೂಡಾ ಮೊಬೈಲ್​ ಹಿಡ್ಕೊಂಡು ಪಬ್​ಜಿ ಆಡ್ತಿದ್ದರಂತೆ. ಬಿಡುವು ಸಿಕ್ಕಾಗಲೆಲ್ಲಾ ಪಬ್​ಜಿ ಮೊರೆ ಹೋಗ್ತಿದ್ರಂತೆ. ಒಂದು ರೀತಿ ಪಬ್​ಜಿಗೆ ಅಡಿಕ್ಟ್​ ಆಗಿದ್ರೂ ಅಂತಾನೇ ಹೇಳಬಹುದು. ಇದ್ರಿಂದ ಆತಂಕಕ್ಕೊಳಗಾಗಿದ್ದ ರಕ್ಷಣಾ ಇಲಾಖೆ ಪಬ್​ಜಿಯನ್ನ ಬ್ಯಾನ್ ಮಾಡಿದೆ. ದೆಹಲಿಯ ಸಿಆರ್​ಪಿಎಫ್​ ಹೆಡ್​ ಕ್ವಾಟ್ರಸ್​ನಿಂದ ಮೇ 6 ರಂದು ಅಧಿಕೃತ ಆದೇಶ ಹೊರಡಿಸಲಾಗಿದೆ. ಅಲ್ಲದೇ ರಕ್ಷಣಾ ಇಲಾಖೆಯ ಎಲ್ಲಾ ಯುನಿಟ್​ಗಳ ಡೆಪ್ಯುಟಿ ಇನ್ಸ್​ಪೆಕ್ಟರ್ಸ್​ ಆಫ್​ ಜೆನರಲ್​ಗಳೂ ಪಬ್​ಜಿ ಬ್ಯಾನ್​ ಮಾಡಿ ಆದೇಶ ಹೊರಡಿಸಿದ್ದಾರೆ. ಪಬ್​ಜಿ ಅಡಿಕ್ಷನ್​ನಿಂದ ಸೈನಿಕರ ಸಾಮರ್ಥ್ಯ ಕಡಿಮೆಯಾಗುತ್ತದೆ. ಕೆಲಸದ ಮೇಲಿನ ಆಸಕ್ತಿ, ಸಾಮಾಜಿಕ ಸಾಮರ್ಥ್ಯ ಹಾಗೂ ಯುದ್ಧಭೂಮಿ ಸಾಮರ್ಥ್ಯವನ್ನ ಕಳೆದುಕೊಳ್ಳುತ್ತಿದ್ದಾರೆ ಎಂಬ ಕಾರಣಗಳಿಂದಾಗಿ ಪಬ್​ಜಿ ಬ್ಯಾನ್​ ಮಾಡಲಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv