ಫುಟ್‌ಬಾಲ್‌ ವಿಶ್ವಕಪ್‌: ಫೈನಲ್​ಗೆ ಕ್ರೋವೇಷ್ಯಾ

ಮಾಸ್ಕೊ: ಫಿಫಾ ಫುಟ್​ಬಾಲ್​​ ವಲ್ಡ್​​ಕಪ್​​ ಎರಡನೇ ಸೆಮಿಫೈನಲ್​​​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕ್ರೊವೇಷ್ಯಾ ಇಂಗ್ಲೆಂಡ್​​ ವಿರುದ್ಧ 2-1 ಅಂತರದಲ್ಲಿ ಜಯಗಳಿಸಿದ್ದು, ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಸಿದೆ. ಕ್ರೊ​​ವೇಷ್ಯಾದ ಮಾರಿಯೋ ಮ್ಯಾಂಡ್ಕುಕಿಕ್​​ ಹಾಗೂ ಇವಾನ್​​​ ಪೆರಿಸಿಕ್​​​​ ತಲಾ ಒಂದೊಂದು ಗೋಲ್​​ ಗಳಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ರು. ಇದಕ್ಕೂ ಮುನ್ನ ಇಂಗ್ಲೆಂಡ್‌ ಪರ ಕೈರನ್ ಟ್ರಿಪರ್ ಮೊದಲು ಗೋಲು ಬಾರಿಸಿ ಇಂಗ್ಲೆಂಡ್‌ ಮುನ್ನಡೆ ನೀಡಿದ್ರು. 20 ವರ್ಷಗಳ ಹಿಂದೆ ಮೊದಲ ಮ್ಯಾಚ್​​​ ಆಡಿದ ಕ್ರೊವೇಷ್ಯಾ 3ನೇ ಸ್ಥಾನ ಗಳಿಸಿ ಎಲ್ಲರ ಗಮನ ಸೆಳೆದಿತ್ತು. ಸದ್ಯ ಈ ಬಾರಿಯ ಫೈನಲ್​ಗೆ ಎಂಟ್ರಿ ಕೊಟ್ಟಿರೋ ಕ್ರೊವೇಷ್ಯಾ ಇದೇ 15 ರಂದು ಫ್ರಾನ್ಸ್‌ ವಿರುದ್ಧ ಚಾಂಪಿಯನ್‌ ಪಟ್ಟಕ್ಕಾಗಿ ಸೆಣಸಾಟ ನಡೆಸಲಿದೆ.