ಡೇಂಜರೆಸ್​​ ಶಾರ್ಕ್​​ ಮೀನನ್ನ ತೊಡೆ ಮೇಲೆ ಕೂರಿಸಿಕೊಂಡು ಪಿಸುಗುಟ್ಟಿದ ಸ್ಕೂಬಾ ಡೈವರ್..!

ಶಾರ್ಕ್​​ಗಳಂದ್ರೆ ಯಾರಿಗೆ ತಾನೆ ಭಯವಾಗಲ್ಲ. ಫೋಟೋದಲ್ಲಿ ಅವುಗಳ ಹಲ್ಲು ನೋಡಿದ್ರೇನೇ ಮೈಯೆಲ್ಲಾ ಜುಮ್ಮೆನ್ನುತ್ತೆ. ಅಂಥದ್ರಲ್ಲಿ ಇಲ್ಲೊಬ್ಬರು ಶಾರ್ಕ್​​​ನೊಂದಿಗೆ ಸ್ನೇಹ ಬೆಳೆಸಿಕೊಂಡಿರೋದು ನೋಡಿದ್ರೆ ಎಚ್ಚರಿಯಾಗುತ್ತೆ.

ಕ್ರಿಸ್ಟಿನಾ ಜೆನಾಟೋ.. ಸ್ಕೂಬಾ ಡೈವಿಂಗ್​ನಲ್ಲಿ ಸಾಕಷ್ಟು ಹೆಸರು ಮಾಡಿರುವ ಮಹಿಳೆ. ಇವರು, ಕಳೆದ 2 ದಶಕಗಳಿಂದ ಜಲಚರಗಳ ಜೊತೆ ನಿಕಟ ಸಂಬಂಧ ಇಟ್ಕೊಂಡು ಬಂದಿದ್ದಾರೆ.  47 ವರ್ಷದ ಕ್ರಿಸ್ಟಿನಾ ಜೆನಾಟೋ ಕಳೆದ 25 ವರ್ಷಗಳಿಂದ ಸ್ಕೂಬಾ ಡೈವಿಂಗ್ ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ಸ್ಕೂಬಾ ಡೈವಿಂಗ್​​ ವೇಳೆ ತೆಗೆದ ಕೆಲವು ಫೋಟೋಗಳನ್ನ ಫೇಸ್​​ಬುಕ್​​ನಲ್ಲಿ ರಿವೀಲ್ ಮಾಡಿದ್ದಾರೆ. ಸ್ಕೂಬಾ ಡೈವಿಂಗ್ ಮಾಡುತ್ತ ಶಾರ್ಕ್​ ಮೀನುಗಳ ಗೂಡಿಗೆ ಬಂದ ಈಕೆ, ಅಲ್ಲಿದ್ದ ಮೀನುಗಳನ್ನ ತಮ್ಮದೇ ಸ್ಟೈಲ್​ನಲ್ಲಿ ಮಾತನಾಡಿಸಿದ್ದಾರೆ. ಅಲ್ಲದೇ 8 ಅಡಿ​ ಉದ್ದದ ಶಾರ್ಕ್​​ವೊಂದನ್ನ ತಮ್ಮ ಕಾಲ ಮೇಲೆ ಕೂರಿಸಿಕೊಂಡು ಆರೈಕೆ ಮಾಡಿದ್ದಾರೆ.

Through the years I have had many articles written about my work. This from Mythily Ramachandran touched my soul in a…

Posted by Cristina Zenato on Thursday, March 28, 2019


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv