ಕ್ರಿಸ್ಟಿಯಾನೊ ರೋನಾಲ್ಡೊಗೆ ಜಾರಿ ಆಯ್ತು ಅರೆಸ್ಟ್​ ವಾರೆಂಟ್​..!

ಪೋರ್ಚುಗಲ್​ ಫುಟ್​ಬಾಲ್​ ದಿಗ್ಗಜ ಕ್ರಿಸ್ಟಿಯಾನೊ ರೋನಾಲ್ಡೊ ವಿರುದ್ಧ ಅರೆಸ್ಟ್ ವಾರೆಂಟ್​ ಜಾರಿಯಾಗಿದೆ. ಅತ್ಯಾಚಾರ ಆರೋಪಕ್ಕೆ ಸಬಂಧಿಸಿದಂತೆ ಸ್ಟಾರ್​ ಆಟಗಾರನ ವಿರುದ್ಧ ಲಾಸ್ ವೇಗಾಸ್ ಮೆಟ್ರೋಪಾಲಿಟನ್ ಪೋಲಿಸ್ ವಾರೆಂಟ್​ ಜಾರಿ ಮಾಡಿದ್ದಾರೆ. ಕ್ಯಾಥರಿನ್ ಮಯೋರ್ಗಾ ಎಂಬ 34 ವರ್ಷದ ಮಹಿಳೆ, 2009ರಲ್ಲಿ ಅಮೆರಿಕಾದ ಲಾಸ್ ವೇಗಸ್​​ನ ಹೊಟೇಲ್ ರೂಮೊಂದರಲ್ಲಿ ರೊನಾಲ್ಡೋ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿದ್ದರು. ಕಳೆದ 2018ರ ಆಕ್ಟೋಬರ್​ನಲ್ಲಿ ಮಿ ಟೂ ಅಭಿಯಾನದ ಮೂಲಕ ಈ ಸುದ್ದಿಯನ್ನ ಹೊರಹಾಕಿದ್ದ ಸಂತ್ರಸ್ತೆ, ಅತ್ಯಾಚಾರದ ವಿಷಯವನ್ನ ಮುಚ್ಚಿಡುವಂತೆ ದೊಡ್ಡ ಮೊತ್ತದ ಆಮಿಷ ಹೊಡ್ಡಲಾಗಿತ್ತು ಎಂದು ದೂರಿದ್ದರು. ಈ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಲಾಸ್ ವೇಗಾಸ್ ಪೋಲಿಸರು, ರೊನಾಲ್ಡೋ DNA ಸ್ಯಾಂಪಲ್​ ನೀಡುವಂತೆ ತಿಳಿಸಿದ್ದರು. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ರೊನಾಲ್ಡೋ ಸಹಕರಿಸದಿದ್ದರಿಂದ ರೊನಾಲ್ಡೋ ವಿರುದ್ಧ ವಾರೆಂಟ್​ ಜಾರಿಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv