ಕೊಹ್ಲಿ ಬಾಯ್ಸ್​ ಕಿಂಡಲ್ ಮಾಡಿದ್ರಾ ಹರ್ಭಜನ್..?

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ವಿರಾಟ್​ ಕೊಹ್ಲಿ ಪಡೆಯ ನೀರಸ ಪ್ರದರ್ಶನ ಅಭಿಮಾನಿಗಳು ಅಸಮಾಧಾನ ಗೊಂಡಿದ್ದಾರೆ. ಎಲ್ಲೇ ಹೋದ್ರು ನಿಮ್ ಹಣೆಬರಹವೇ ಇಷ್ಟು ಎಂದು ಕಿಡಿಕಾರುತ್ತಿದ್ದಾರೆ. ಅಭಿಮಾನಿಗಳ ಜೊತೆಗೆ ಭಾರತದ ಸೀನಿಯರ್ ಕ್ರಿಕೆಟರ್​ ಹರ್ಭಜನ್ ಸಿಂಗ್ ಸಹ ವಿರಾಟ್​ ಪಡೆಯ ತಿಣುಕಾಟವನ್ನ ಪರೋಕ್ಷವಾಗಿ ಆಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಭಜ್ಜಿ, ನಿರೀಕ್ಷೆ ಹಾಗೂ ನಂಬಿಕೆ ತಪ್ಪಲ್ಲ. ಯಾರಿಂದ ನಿರೀಕ್ಷೆ, ಯಾರ ಮೇಲೆ ನಂಬಿಕೆ ಇಡುತ್ತಿದ್ದೇವೆ ಅನ್ನೋದು ತಿಳಿದಿರಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಹಲವರು ಹರ್ಭಜನ್​ರ ಈ ಮಾತುಗಳನ್ನ ಟೀಮ್ ಇಂಡಿಯಾ ಪ್ರದರ್ಶನಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಹೀಗಾಗಿ ಭಜ್ಜಿ ವಿರಾಟ್ ಆ್ಯಂಡ್​ ಕಂಪನಿಯನ್ನ ಅಣಕಿಸಿದ್ರಾ ಅನ್ನೋ ಅನುಮಾನ ಮೂಡಿದೆ.

ಅಡಿಲೇಡ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಚೇತೇಶ್ವರ್​ ಪೂಜಾರರನ್ನು ಬಿಟ್ಟು ಟೀಮ್ ಇಂಡಿಯಾದ ಉಳಿದ ಬ್ಯಾಟ್ಸ್​​ಮನ್​ಗಳು ಸಂಪೂರ್ಣ ಮುಗ್ಗರಿಸಿದ್ರು. ಚೇತೇಶ್ವರ್ ಪೂಜಾರಾ ಶತಕ ಸಿಡಿಸಿದೇ ಇದ್ದರೇ, ಕಾಂಗರೂ ನಾಡಲ್ಲಿ ಭಾರತದ ಮಾನ ಮೂರು ಕಾಸಿಗೆ ಹರಾಜಾಗುತ್ತಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv