ಸದ್ಯದಲ್ಲೇ ಬರಲಿದೆ ಲೇಡಿಸ್​ ಸ್ಪೆಷಲ್​ ಐಪಿಎಲ್

ದೆಹಲಿ: ಪ್ರಸ್ತುತ ನಡೆಯುತ್ತಿರುವ ಐಪಿಎಲ್​ ಪ್ರೀಮಿಯರ್​ ಲೀಗ್​ನ ಪ್ಲೇ ಆಫ್​ ಪಂದ್ಯಾವಳಿ ಸಮಯಕ್ಕೆ ಸರಿಯಾಗಿ ಮಹಿಳೆಯರ ಟಿ-20 ಚಾಲೆಂಜ್​ ಪಂದ್ಯಾವಳಿಗಳು ನಡೆಯಲಿವೆ ಅಂತಾ ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಈ ಸಂಬಂಧ ಮಾಹಿತಿ ನೀಡಿರುವ ಬಿಸಿಸಿಐ ಒಟ್ಟು ಮೂರು ತಂಡಗಳು ಒಂದೊಂದು ತಂಡದ ವಿರುದ್ಧವೂ ತಲಾ 2 ಮ್ಯಾಚ್​ಗಳನ್ನು ಆಡಲಿದ್ದು, ಅಂತಿಮವಾಗಿ ಟಾಪ್​ 2 ಟೀಮ್​ಗಳು ಪರಸ್ಪರ ಪ್ರಶಸ್ತಿಗಾಗಿ ಮೇ 11 ರಂದು ಸೆಣಸಾಡಲಿದೆ ಅಂತಾ ತಿಳಿಸಿದೆ. ಇನ್ನು ವಿಶ್ವದ ಶ್ರೇಷ್ಟ ಕ್ರಿಕೆಟ್ ತಾರೆಯರ ಜೊತೆ ವುಮೆನ್ಸ್​ ಟೀಂ ಇಂಡಿಯಾದ ಫ್ಯೂಚರ್ಸ್​ ಸ್ಟಾರ್​ಗಳು ಮೂರು ತಂಡಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೆಲ್ಲರ ಟ್ಯಾಲೆಂಟ್​ಗಳನ್ನು ಒರೆಗೆ ಹಚ್ಚುವ ಸಲುವಾಗಿ ಈ ಮ್ಯಾಚ್​ಗಳು ನಡೆಯಲಿವೆ ಅಂತಾ ಬಿಸಿಸಿಐ ತಿಳಿಸಿದೆ. ಇನ್ನೂ ಮೇ 6 ರಂದು ಸೂಪರ್ ನೋವಾ ಹಾಗೂ ಟ್ರಯಲ್​ಬ್ಲೇಜರ್ಸ್​ ಮಧ್ಯೆ ಮ್ಯಾಚ್​ ನಡೆಯಲಿದೆ. ಇನ್ನೊಂದೆಡೆ ವಲೋಸಿಟಿ ತಂಡ ಸೂಪರ್​ನೋವಾದ ಜೊತೆ ಮೇ 8 ರಂದು ಸೆಣೆಸಾಡಲಿದೆ. ಈ ಎಲ್ಲಾ ಮ್ಯಾಚ್​ಗಳು ಜೈಪುರದಲ್ಲಿ ನಡೆಯಲಿವೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv